UK Suddi
The news is by your side.

ದೇಶದಾದ್ಯಂತ ವಿಸ್ತರಿಸುತ್ತಿರುವ ಬಿಜೆಪಿ ಪ್ರಾಬಲ್ಯಕ್ಕೆ ದಕ್ಷಿಣದಲ್ಲಿ ಕರ್ನಾಟಕದಿಂದ ವಿಜಯಯಾತ್ರೆ ಆರಂಭಿಸಬೇಕು:ಬಿ ಎಸ್ ಯಡಿಯೂರಪ್ಪ.

ಬಾಗಲಕೋಟ:ಬಿಜೆಪಿಯ ಬೂತ್ ಸಶಕ್ತೀಕರಣ ಅಭಿಯಾನ ಉತ್ತರ ಕರ್ನಾಟಕದಲ್ಲಿ ಚಾಲನೆ ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿಗಳು ಹಾಗು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇಂದು ಬಾಗಲಕೋಟೆಯಲ್ಲಿ ಉತ್ತರಕರ್ನಾಟಕದ ವಿಧಾನಸಭಾ ಉಸ್ತುವಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಾದ್ಯಂತ ವಿಸ್ತರಿಸುತ್ತಿರುವ ಬಿಜೆಪಿ ಪ್ರಾಬಲ್ಯಕ್ಕೆ ದಕ್ಷಿಣದಲ್ಲಿ ಕರ್ನಾಟಕದಿಂದ ವಿಜಯಯಾತ್ರೆ ಆರಂಭಿಸಬೇಕೆಂದು ರಾಷ್ಟ್ರೀಯ ನಾಯಕರ ಒತ್ತಾಸೆಯಾಗಿದೆ. ಅದಕ್ಕೆ ಪೂರಕವಾಗಿ ನಾವೆಲ್ಲರೂ ಸಂಘಟಿತರಾಗಿ ಮುನ್ನಡಿಯಿಡಬೇಕೆಂದು ಅವರು ಕರೆ ನೀಡಿದರು. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಅನೇಕ ಸಲಹೆ ಸೂಚನೆಗಳನ್ನು ಮಾನ್ಯ ಯಡಿಯೂರಪ್ಪನವರು ಈ ಸಂದರ್ಭದಲ್ಲಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೆ ಎಸ್ ಈಶ್ವರಪ್ಪ ಹಾಗು ಪಕ್ಷದ ಅನೇಕ ಹಿರಿಯ ಮುಖಂಡರುಗಳೂ ಸೇರಿದಂತೆ  ಧಾರವಾಡ, ಬೆಳಗಾವಿ, ಕಲ್ಬುರ್ಗಿ ಮತ್ತು ಬಳ್ಳಾರಿ ವಿಭಾಗದ ಉಸ್ತುವಾರಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Comments