ಬಾಗಲಕೋಟ ಹಬ್ಬಕ್ಕೆ ಚಾಲನೆ.
ಬಾಗಲಕೋಟ : ಪ್ರತಿವರ್ಷದಂತೆ ಈ ವರ್ಷವೂ ನವನಗರದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಿನ್ನೆಯಿಂದ ಮೂರು ದಿನಗಳ ಕಾಲ ನಡೆಯುವ ಬಾಗಲಕೋಟ ಹಬ್ಬಕ್ಕೆ ಬಾಗಲಕೋಟ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವೀಣಾ ಕಾಶಪ್ಪನವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಗಲಕೋಟ ಹಬ್ಬದ ಪ್ರಯುಕ್ತ ನಿನ್ನೆ ಸಂಜೆ ಬೈಕ್ ರ್ಯಾಲಿಯನ್ನು ಬಾಗಲಕೋಟದ ನವನಗರ ಹಾಗೂ ವಿದ್ಯಾಗಿರಿಯಲ್ಲಿ ಏರ್ಪಡಿಸಲಾಗಿತ್ತು.
ಮೂರು ದಿನಗಳ ಕಾಲ ಗ್ರಾಹಕರ ಮೇಳ, ಆಹಾರ ಮೇಳ ಹಾಗೂ ಆಟೋ ಎಕ್ಸಪೋದೊಂದಿಗೆ ಪ್ರತಿದಿನ ಸಂಜೆ ನಾಡಿನ ಖ್ಯಾತ ನಾಮರಿಂದ ಸಂಗೀತ, ನೃತ್ಯ, ಬೊಂಬೆ ಆಟ, ಜಾದು, ಬೆಳಕು ಉಸುಕಿನ ಆಟ, ನಾಟಕ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.
ಇನ್ನು ಮೂರು ದಿನಗಳ ನಡೆಯುವ ಬಾಗಲಕೋಟ ಹಬ್ಬವನ್ನು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಸಹಯೋಗದೊಂದಿಗೆ ಆಚರಿಸುಲಾಗುತ್ತಿದೆ.