UK Suddi
The news is by your side.

ಬೆಟದೂರ:ಜಿಲ್ಲಾ ಪಂಚಾಯತ ಆಶ್ರಯದಲ್ಲಿ ಶೌಚಲಯ ನಿರ್ಮಾಣಕ್ಕೆ ಭೂಮಿ ಪೂಜೆ.

ಧಾರವಾಡ: ಕುಂದಗೋಳ ತಾಲ್ಲೂಕಿನ ಬೆಟದೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಶೌಚಾಲಯ ನಿರ್ಮಾಣಕ್ಕೆ ಭೂಮಿ ಪೂಜಾ ನೇರವೇರಿಸಲಾಯಿತು.

ಕೇಂದ್ರ ಕೌಶಲ್ಯ ಅಭಿವೃದ್ದಿ ಸಚಿವರಾದ ಅನಂತ ಕುಮಾರ್ ಹೆಗಡೆ ಹಾಗು ಸಂಸದರಾದ ಪ್ರಹ್ಲಾದ್ ಜೋಶಿ ಭೂಮಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.

 
ನಂತರ ಬೆಟದೂರ ಗ್ರಾಮದ ಲಾಯನ್ಸ ನಾಯಕ ಹುತಾತ್ಮ ವೀರ ಯೋಧ ಹನುಮಂತಪ್ಪ ಕೊಪ್ಪದ ಅವರ ಸಮಾಧಿಗೆ ಗೌರವ ಸಲ್ಲಿಸಿದರು ಜೊತೆಗೇ ಹಣಮಂತಪ್ಪ ಕೊಪ್ಪದ ಅವರ ಮನೆಗೆ ತೆರಳಿ ಮನೆಯವರ ಕುಶಲೋಪ ಸಮಾಚಾರ ವಿಚಾರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವರಾದ ಅನಂತಕುಮಾರ ಹೆಗಡೆ ಹಾಗು ಸಂಸದರಾದ ಪ್ರಹ್ಲಾದ ಜೋಶಿ, ಕುಂದಗೋಳ ಮತಕ್ಷೇತ್ರದ ಬಿಜೆಪಿ ಮುಖಂಡರಾದ ಎಮ್ ಆರ್ ಪಾಟೀಲ, ಎಸ್ ಐ ಚಿಕ್ಕನಗೌಡ್ರ, ಧಾರವಾಡ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಈರಣ್ಣಾ ಜಡಿ, ಮಾಲತೇಶ ಶಾಗೋಟಿ,ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಚೈತ್ರಾ ಶಿರೂರ, ಶಿವಾನಂದ ಕರಿಗಾರ, ಭರಮಪ್ಪ ಮುಗುಳಿ, ಎನ್ ಎನ್ ಪಾಟೀಲ, ಪ್ರಿತ್ವಿರಾಜ್ ಕಾಳೆ  ಹಾಗು ಗ್ರಾಮದ ಹಿರಿಯರು ಉಪಸ್ಥಿತರಿದ್ದರು..

Comments