UK Suddi
The news is by your side.

ಶುಭಾಶಯ.

ನಿನ್ನ ಜನ್ಮದಿನಕ್ಕೆ ಕೊಡುಗೆಯಾಗಿ ನನ್ನೀ ಕವನ ನನ್ನವಳಿಗೆ ಅರ್ಪಣೆ……. ಶುಭಾಶಯ
ನನಗಾಗಿ ಬಂದವಳೆ

ಮನದಲ್ಲಿ ಮಿಡಿದವಳೆ

ಹೃದಯಕ್ಕೆ ಹತ್ತಿರವಾದವಳೆ

ಇಂದಿಲ್ಲ ನಿನ್ನ ನೆಲೆ ನನ್ನಲ್ಲೆ

ಆದರೂ ನನ್ನಂತರಾಳದಲ್ಲಿ ನೆಲೆಸಿದವಳೆ
ಸುರಿಸುತಿದ್ದೆ ಅಂದು ನಿನ್ನ ನೋಟದ ಮಳೆ

ತುಂಬಿತ್ತು ನನ್ನ ಹೃದಯದ ಹೊಳೆ

ಮಂದಹಾಸ ನೀಡುತಿತ್ತು ನಿನ್ನ ರಗಳೆ

ಕಣ್ಣು ಮುಚ್ಚಿದಾಗಲೆಲ್ಲಾ ಕಾಣುವುದು ಆ ನಿನ್ನ ನೋಟಗಳೆ
ಬಂದಿತ್ತು ನನಗೊಂದು ದಿನ ಕರೆ

ಶುರುವಾಗಿತ್ತು ನಿನ್ನ ಕಣ್ಣೀರ ಧಾರೆ

ಒತ್ತಿ ಹೇಳಿದ್ದೆ ಅದರ ಕಾರಣ

ನಿಶ್ಚಯವಾಗಿತ್ತು ನಿನ್ನ ಮಾಂಗಲ್ಯಧಾರಣ
ಒಡೆಯಿತೆನ್ನ ಹೃದಯದ ಬಾಗಿಲು

ಕಳೆದುಕೊಂಡೆ ಅಂದೆ ನಿನ್ನ ಮಡಿಲು

ನೀನಾದೆ ಬೇರೆಯವನ ಪಾಲು

ಒಪ್ಪಿಕೊಂಡೆ ಅಂದೇ ನನ್ನ ಸೋಲು
ಹತ್ತಿರುವೆ ಬಾಳೆಂಬ ದೋಣಿಗೆ

ಸೆಳೆ ಪತಿದೇವರ ಪ್ರೀತಿ ನಿನ್ನೆಡೆಗೆ

ನುಗ್ಗುತಿರು ಗೆಲುವೆಂಬ ದಡದೆಡೆಗೆ

ಮರೆಯಬೇಡ ಗೆಳತಿ ನನ್ನೊಡನೆ ಕಳೆದ ಗಳಿಗೆ

ಜನ್ಮದಿನದ ಶುಭಾಶಯ ಎನ್ನ ಮನದೊಡತಿ ಸುಜಾತಾಗೆ…..
– ಸುರೇಶ ಜಂಬಗಿ

ದೂರವಾಣಿ-8105782268

Comments