UK Suddi
The news is by your side.

ರಾಂಪುರ:ಇಂದಿನಿಂದ ದೇವಿ ಪುರಾಣ ಆರಂಭ.

ಬಾಗಲಕೋಟ: ನವರಾತ್ರಿ ಉತ್ಸವದ ಅಂಗವಾಗಿ ಜಮಖಂಡಿ ತಾಲೂಕಿನ ರಾಂಪುರ ನಗರದ ಅಮ್ಮಜೇರಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ದೇವಿ ಮಂಟಪದಲ್ಲಿ ದೇವಿ ಪುರಾಣ ಪಾರಾಯಣವು ಈ ವರ್ಷವೂ ವಿಶೇಷವಾಗಿ ನಡೆಯುತ್ತಿದೆ.

ದೇವಿ ಆರಾಧಕರು ಹಾಗು ಖ್ಯಾತ ಜ್ಯೋತಿಷಿಗಳಾದ ಶ್ರೀ ಶಂಕ್ರೇಪ್ಪ ಅಮ್ಮಲಜೇರಿ ಅವರು ಇಂದಿನಿಂದ ಪ್ರತಿ ದಿನ ಸಂಜೆ 7 ರಿಂದ 9 ಘಂಟೆವರೆಗೆ ಸತತ ಒಂಬತ್ತು ದಿನಗಳ ಕಾಲ ಶ್ರೀ ದೇವಿ ಪುರಾಣ ಪಾರಾಯಣ ಮಾಡಲಿದ್ದಾರೆ.
ಅಮ್ಮಲಜೇರಿ ಅವರ ಮನೆಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿ ಪುರಾಣ ಪಾರಾಯಣವು ಸುಮಾರು 50 ವರ್ಷಗಳಿಂದ ಇಲ್ಲಿ ನಡೆದು ಬರುತ್ತಿರುವದು ವಿಶೇಷ.

ಖ್ಯಾತ ಜ್ಯೋತಿಷಿಗಳಾದ ಶ್ರೀ ಶಂಕ್ರೇಪ್ಪ ಅಮ್ಮಲಜೆರಿ ಅವರಿಗೆ ರಾಂಪುರದ ಶ್ರೀ ನೀಲಕಂಠೆಶ್ವರ ಭಜನಾ ಮಂಡಳದವರಾದ ಗುರುಶಾಂತ ಮಾಳಗಿ,ಗುರಪ್ಪ ಮೂಲಿಮನಿ,ಸಾದಿಕ್ ತಳವಾರ,ಮಲ್ಲಪ್ಪ ಹುಲಕುಂದ,ಕರವಿರಪ್ಪ ಗೊಂಡಕರ್ ತಬಲಾ ಹಾಗು ಹಾರ್ಮೋನಿಯಮಗೆ ಸಾಥ ನೀಡಲಿದ್ದಾರೆ.

ಸೆಪ್ಟೆಂಬರ್ 30ರ ವಿಜಯದಶಮಿಯಂದು ಶ್ರೀ ದೇವಿ ಪುರಾಣವು ಮಂಗಲವಾಗಲಿದೆ.

-ಗುರು ಅರಳಿಮರದ..

Comments