UK Suddi
The news is by your side.

ಕುಮಾರಸ್ವಾಮಿ ಅವರ ಚಿಕಿತ್ಸೆ ಯಶಸ್ವಿಯಾಗಿ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನೆ.

ಬೆಳಗಾವಿ: ಮಾಜಿ ಮುಖ್ಯಮಂತ್ರಿಳಾದ ಎಚ್ ಡಿ ಕುಮಾರಸ್ವಾಮಿ ಅವರಿಗೆ ನಾಳೆ ನಡೆಯಲಿರುವ ಹೃದಯ ಚಿಕಿತ್ಸೆ ಯಶಸ್ವಿಯಾಗಿ ಆಗಲಿ ಎಂದು ಇಂದು ಕಿತ್ತೂರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂ ಕೆ ಹುಬ್ಬಳ್ಳಿಯಲ್ಲಿ  ಹಜರತ್ ಸೈಯ್ಯದ್ ಮುಗಟಶಾವಲಿ ಬಾಬಾ ದರ್ಗಾ ಷರೀಫದಲ್ಲಿ ಕುಮಾರಸ್ವಾಮಿ ಅವರ ಚಿಕಿತ್ಸೆ ಯಶಸ್ವಿಯಾಗಿ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಿತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಮತ್ತು ಸರ್ವ ಧರ್ಮದ ಜೆ ಡಿ ಎಸ್ ಪದಾಧಿಕಾರಿಗಳಾದ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಮಲಿಕಜಾನ ಇರಾನಿ,ಕಿತ್ತೂರ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮಹೇಶ ಹೂದಲಿ,ಮಕ್ತುಮ ಸನದಿ,ಹಾರುಣ್ ಸಾಹೇಬ್ ಖಾನ್, ಮುಸ್ತಪಾ ಮೊಕಾಶಿ ಸಮೀರ್ ಪಟೇಲ್, ಕಲಂದರ್ ಪಟೇಲ್, ಹಾಗು ಮುಖಂಡರಾದ ಶಿವನಶಿಂಗ್ ಮೊಕಾಶಿ, ಅಶೋಕ್ ಹಲಕಿ, ಶಂಕರ್ ಕಮತಗಿ ಉಪಸ್ಥಿತರಿದ್ದರು.

Comments