ಸ್ವಚ್ಚ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಅತಿ ಮುಖ್ಯವಾದದ್ದು:ಲಿಂಗರಾಜ ನಿಡುವಣೀ.
ಧಾರವಾಡ:ಎಸ್.ಜೆ ಎಮ್ ವಿ.ಎಸ್. ಮಹಿಳಾ ಮಹಾವಿದ್ಯಾಲಯ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಭಿರ ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ “ಸ್ವಚ್ಛ ಭಾರತ ನಿರ್ಮಾಣದಲ್ಲಿ ಇಂದಿನ ಯುವಕರ ಪಾತ್ರ” ಎಂಬ ವಿಷಯದ ಕುರಿತು ನೆಹರು ಯುವ ಕೇಂದ್ರದ ಮಾರ್ಗದರ್ಶಕರಾದ ಲಿಂಗರಾಜ ನಿಡುವಣೀ ಅವರು ಉಪನ್ಯಾಸವನ್ನು ನೀಡಿದರು.
ಇದೇ ವೇಳೆ ಕೃಷಿ ಅಧಿಕಾರಿ ಚೆನ್ನಪ್ಪ ಅಂಗಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗರಾಜ ಅಂಗಡಿ, ಮಹಾನಂದ ಗೋಸಾವಿ ಹಾಗೂ ಮೆನಕಾ,ಕಾಲೇಜು ಶಿಕ್ಷಕ ವೃಂದ, ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.