UK Suddi
The news is by your side.

ಮನೆ ಮನೆಗೆ ಕಾಂಗ್ರೆಸ್ಸ್ ಅಭಿಯಾನಕ್ಕೆ ಎಸ್ ಆರ್ ಪಾಟೀಲರಿಂದ ಚಾಲನೆ.

ಬಾಗಲಕೋಟ: ಜಿಲ್ಲೆಯಲ್ಲಿ ಇಂದು ಜಿಲ್ಲಾ ಮಟ್ಟದ  ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್ ಆರ್ ಪಾಟೀಲರು ಚಾಲನೆ ನೀಡಿದರು.


ನಂತರ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್ ಆರ್ ಪಾಟೀಲ  “೨೦೧೩ರಲ್ಲಿ ಕರ್ನಾಟಕ ಮಹಾ ಜನತೆಗೆ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸಿ ಕರ್ನಾಟಕವನ್ನು ಭಾರತದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವನ್ನಾಗಿಸಿ ಶೋಷಿತರು,ಅವಕಾಶ ವಂಚಿತರು,ನೊಂದವರಿಗೆ ಧನಿಯಾಗಿ ಸಾಮಾಜಿಕ ನ್ಯಾಯದ ಸೂತ್ರವನ್ನು ಅನುಸರಿಸಿ, ರಾಜ್ಯದ ಜನತೆಗೆ ನೆಮ್ಮದಿಯ ಬಾಳನ್ನು ನೀಡಲು ಶ್ರಮಿಸಿದ ನಮ್ಮ ಸರ್ಕಾರದ ಸಾಧನೆಗಳನ್ನು ನೀವು ಗಮನಿಸಿದ್ದಿರಿ ಮತ್ತು ಬಹುತೇಕ ಜನರು ಅದರ ಫಲಾನುಭವಿಗಳೂ ಆಗಿದ್ದಿರಿ.
ಇದೇ ಸಂಧರ್ಭದಲ್ಲಿ ೨೦೧೪ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್,ಡಿ,ಎ ಸರ್ಕಾರ ಹೇಳಿದ್ದೇನು-ಮಾಡಿದ್ದೇನು ಎಂಬುದು ನಿಮಗೆ ತಿಳಿದಿದೆ.


ಭಾರತದ ಬಹುಸಂಸ್ಕ್ರತಿಗೆ,ಅಭಿವ್ಯಕ್ತಿ ಸ್ವಾತಂತ್ರಕ್ಕೆ,ಆಳುವವರ ತಪ್ಪನ್ನು ಪ್ರಶ್ನಿಸುವ ನಮ್ಮೆಲ್ಲರಹಕ್ಕಿಗೆ ಇಂದು ಎದುರಾಗಿರುವ ಸವಾಲುಗಳನ್ನು ನಾವು ಸ್ವೀಕರಿಸಲೇಬೇಕಾಗಿದೆ ಮತ್ತು ಕರ್ನಾಟಕದ ಮುಖಾಂತರ ನಿರ್ಣಾಯಕವಾಗಿ ಉತ್ತರ ಕೊಡಲೇಬೇಕಾಗಿದೆ.
ಇದಕ್ಕಿರುವ ಅವಕಾಶ ೨೦೧೮ರ ವಿಧಾನಸಭಾ ಚುನಾವಣೆ.ಈ  ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತದಾನ ಮಾಡುವ ಮುಖಾಂತರ ಸ್ವಾಭಿಮಾನಿ, ‌ಸಾಮರಸ್ಯದ ಕರ್ನಾಟಕ ಕಟ್ಟಲು ಸಹಾಯಮಾಡಿ.ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ,ಮತ್ತೊಮ್ಮೆ ನಮ್ಮನ್ನು ಆಶೀರ್ವದಿಸಿ ಎಂದು ಹೇಳಿದರು.

Comments