ಮೈಲಾರ ಮಹಾದೇವ ಟೀಸರ್ ಬಿಡುಗಡೆ..
ಹಾವೇರಿ: ನಗರದ ಹೊರಹೊಲಯದಲ್ಲಿರುವ ಹುತಾತ್ಮ ಮೈಲಾರ ಮಹಾದೇವ ವೀರಸೌಧದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿಲಾಗಿದ್ದ ಹುತಾತ್ಮ ಮೈಲಾರ ಮಹಾದೇವಪ್ಪನವರ ಜೀವನ ಆಧಾರಿತ ಕರುನಾಡ ಹುಲಿ ಮೈಲಾರ ಮಹಾದೇವ ಚಲನಚಿತ್ರದ ಟ್ರೈಲರನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ರುದ್ರಪ್ಪ ಲಮಾಣಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು ನಮ್ಮ ನೆಲದ ಸ್ವಾತಂತ್ರ್ಯ ಹೋರಾಟಗಾರರಾದ ಮೈಲಾರ ಮಹಾದೇವರ ಕುರಿತು ಚಲನಚಿತ್ರ ಬರುತ್ತಿರುವುದು ಸ್ವಾಗತಾರ್ಹ ರಾಜ್ಯ ಸರಕಾರದ ವತಿಯಿಂದ ರಾಜ್ಯಾದ್ಯಂತ ಶಾಲಾ-ಕಾಲೇಜು ಯುವಜನತೆಗೆ ತೋರಿಸುವ ಅವಕಾಶ ಮಾಡಿಕೊಡಲಾಗುವುದು ಎಂದು ಸಚಿವರು ಹೇಳಿದರು..
ಈ ಸಂದರ್ಭದಲ್ಲಿ ಶ್ರೀಗಳು ಹಾವೇರಿಯ ಜಿಲ್ಲಾಧಿಕಾರಿಗಳು. ನಾಯಕ ನಟ ರಾಜ ಗೋಪಿ, ನಟಿ ಅಶ್ವಿನಿ ಉಪಸ್ಥಿತರಿದ್ದರು.