UK Suddi
The news is by your side.

“ಕರುನಾಡು ಸಿಡಿಲು ಬೆಳವಡಿರಾಣಿ ಮಲ್ಲಮ್ಮ” ಕಾದಂಬರಿ ಬಿಡುಗಡೆ.

ಬೆಳಗಾವಿ:ಬೆಳವಡಿ ರಾಣಿ ಮಲ್ಲಮ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಯ.ರು. ಪಾಟೀಲ್ ಅವರು ರಚಿಸಿದ “ಕರುನಾಡು ಸಿಡಿಲು ಬೆಳವಡಿರಾಣಿ ಮಲ್ಲಮ್ಮ” ಕಾದಂಬರಿ ಬಿಡುಗಡೆ ಸಮಾರಂಭವು ನಿನ್ನೆ ಸಂಜೆ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿ ನಡೆಯಿತು.

ಅಕ್ಕಮಹಾದೇವಿ ವಿಶ್ವವಿದ್ಯಾಲಯ ವಿಜಯಪುರದ ಕುಲಪತಿಗಳಾದ ಡಾ.ಸಬಿಹಾ ಭೂಮಿಗೌಡ ಅವರು ‘ಕರುನಾಡ ಸಿಡಿಲು ಬೆಳವಡಿರಾಣಿ ಮಲ್ಲಮ್ಮ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಇದೇ ವೇಳೆ  ವೀರವನಿತೆ  ಮಲ್ಲಮ್ಮ ಕಲಾ ಹಾಗೂ  ಶ್ರೀ ಸಾವಿತ್ರಿದೇವಿ ಶಾಮರಾವ ಪತ್ತಾರ್ ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದ ವತಿಯಿಂದ ಉಪನ್ಯಾಸಕರಿಂದ ವಿದ್ಯಾರ್ಥಿಗಳಿಂದ ಡಾ. ಸಬಿಹಾ ಭೂಮಿಗೌಡ ಅವರಿಗೆ ಸನ್ಮಾನ ಮಾಡಲಾಯಿತು.

ಸಭೆಯಲ್ಲಿ ಶಾಸಕರಾದ ವಿ ಆಯ್ ಪಾಟೀಲ, ಜಿಲ್ಲಾ ಪಂಚಾಯತ ಸದಸ್ಯರಾದ ಈರಣ್ಣ ಕರಿಕಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶಂಕರ ಮಾಡಲಗಿ,ಮಾಜಿ ಶಾಸಕ ಜಗದೀಶ ಮೇಟಗುಡ್ಡ ಸೇರಿದಂತೆ ಹಲವಾರು ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

Comments