UK Suddi
The news is by your side.

ಜೆಡಿಎಸ್ ಕಾರ್ಯಕರ್ತರ ಸಂಘಟನಾ ಕಾರ್ಯಕ್ರಮ.

ಬೆಳಗಾವಿ;ಕಿತ್ತೂರ ವಿಧಾನಸಭಾ ಕ್ಷೇತ್ರದ ಕಲಭಾಂವಿ ಗ್ರಾಮದಲ್ಲಿ ನಿನ್ನೆ ರಾತ್ರಿ 8 ಗಂಟೆಗೆ ಜೆಡಿಎಸ್ ಕಾರ್ಯಕರ್ತರು ಸಂಘಟನಾ ಕಾರ್ಯಕ್ರಮ ನಡೆಯಿತು.

ಕಿತ್ತೂರ ವಿಧಾನಸಭಾ ಕ್ಷೇತ್ರದ ಯುವ ಜೆಡಿಎಸ್ ಅಧ್ಯಕ್ಷರಾದ ಶಂಕರ ಲೋಕೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ‘ಕುಮಾರಣ್ಣನವರ 20 ತಿಂಗಳಕಾಲ ಅಧಿಕಾರದಲ್ಲಿ ಇದ್ದಾಗ  ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ, ಶಾಲೆ ಮಕ್ಕಳಿಗೆ ಸೈಕಲ್ ವಿತರಣೆ, ರೈತರ ಸಾಲ ಮನ್ನಾ ಮಾಡಿದ್ದಾರೆ.2018 ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು  ಮುಖ್ಯ ಮಂತ್ರಿಗಳಾಗಿ ಜೆಡಿಎಸ್ ಪಕ್ಷವನು ಅಧಿಕಾರಕ್ಕೆ ತಂದರೆ 24 ಗಂಟೆ ಒಳಗೆ ರೈತರ ಸಾಲ ಸಂಪೂರ್ಣ ಮನ್ನಾ, ಟ್ರ್ಯಾಕ್ಟರ್ ಸಾಲ ಮನ್ನಾ, ಹಾಗೂ ಅಂಗವಿಕಲರಿಗೆ 2500 ಮಾಶಾಸನ, 50ವರ್ಷದ ರೈತರಿಗೆ 2000 ಮಾಶಾಸನ, 70ವರ್ಷದವರಿಗೆ 5000 ಮಾಶಾಸನ, ಗರ್ಭಿಣಿ ಮಹಿಳೆಯರಿಗೆ 6-9ರ ತಿಂಗಳವರೆಗೆ 6000ರೂ ಮಾಶಾಸನ, ಇನ್ನು ಅನೇಕ ಯೋಜನೆಗಳ ಜಾರಿಗೆ ತರುವದಾಗಿ ಕುಮಾರಸ್ವಾಮಿ ಅವರು ಹೇಳಿದ್ದಾರೆ’ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರಾದ ಶಿವನ ಸಿಂಗ್ ಮೊಖಾಶಿ, ಭ್ರೀಷ್ಟಪ್ಪ ಶಿಂಧೆ, ಮಹೇಶ್ ಹುದಲಿ, ಮಲಿಕ ಜಾನ ಇರಾಣಿ, ಪ್ರವೀಣ್  ರಜಪೂತ್, ಅಶೋಕ್ ಹಲಕಿ, ಮಕ್ತುಮ್ ಸನದಿ, ಕಲ್ಲಪ್ಪ ದೆಗಾವ, ಶ್ರೀಮತಿ ಉಮಾದೇವಿ ಪಾಟೀಲ್, ಶ್ರೀಮತಿ ಅನುಸೂಯ  ಹಿರೇಮಠ್, ಸೇರಿದಂತೆ ಅನೇಕ ಜೆಡಿಎಸ್  ಮುಖಂಡರು ಭಾಗವಹಿಸಿದ್ದರು.

Comments