UK Suddi
The news is by your side.

ಕುವಿಚಾರವಾದಿಯ ಹರಿನಾಲಗೆ

ವಾಲ್ಮೀಕಿ ರಾಮಾಯಣ- ಚಿಕ್ಕವರಿದ್ದಾಗಿನಿಂದಲೂ ನಾವು ಓದಿದ್ದು..
ಶ್ರೀರಾಮ ಅವತಾರ ಪುರುಷ, ಅಹಲ್ಯೆಗೆ ಮುಕ್ತಿ ಕೊಟ್ಟ, ಮಾರೀಚನ ಶಾಪ ಪರಿಹರಿಸಿದ, ಕೇವಲ ರಾಮನಾಮದಿಂದಲೇ ಬಂಡೆಗಲ್ಲು ಸಾಗರದಲ್ಲಿ ತೇಲಿತು, ವಿಷ್ಣುವಿನ ಅವತಾರವೇ ಶ್ರೀರಾಮ, ಆಂಜನೇಯನ ಪರಮದೈವ..

ಹೀಗೆ ಹಲವಾರು ನಾಮರೂಪಗಳಲ್ಲಿ ದೇವರೇ ಎಂದು ರಾಮಾಯಣ ಕರ್ತೃ ವಾಲ್ಮೀಕಿಯೇ ಬರೆದಿರುವಾಗ ಇಲ್ಲೊಬ್ಬ ಕಲಿಯುಗದ ‘ ಭಗವಂತ ‘ ಹೊಸ ಅವತಾರ ತಾಳಿ ಮತ್ತೊಮ್ಮೆ ಮಗದೊಮ್ಮೆ ಶ್ರೀರಾಮನನ್ನೇ ತೆಗಳುವ ಗುತ್ತಿಗೆ ಪಡೆದುಕೊಂಡಿದ್ದಾನೆ. ಈ ಸಲ ಈ ಭಗವಾನ  ಮೈಸೂರಿನಲ್ಲಿ ಅವತರಿಸಿದ್ದು, ಶ್ರೀರಾಮ ದೇವರೆಂದು ವಾಲ್ಮೀಕಿ ಎಲ್ಲೂ ಹೇಳಿಲ್ಲ ಎಂಬುದಾಗಿ ವಿಷಕಾರಿಕೊಂಡಿದ್ದಾನೆ.

ಶ್ರೀರಾಮ ದೇವರಾಗಲಿ,ಬಿಡಲಿ ಈ ಮಹಾನುಭಾವನಿಗೆ ಎಲ್ಲಿ ಉರಿಯತೊಡಗಿತೋ ಆ ಭಗವಂತನೇ ಬಲ್ಲ. ಅದು ರಾಮನ ನಂಬಿದವರಿಗೆ ಬಿಟ್ಟ ವಿಷಯ ಎಂದು ಸುಮ್ಮನೆ ಇರಲು ಯಾಕಾಗುವುದಿಲ್ಲ ಇವನಿಗೆ ? ಯುಗಗಳಿಂದ ನಂಬಿಕೊಂಡು ಬಂದ ದೇವರನ್ನು ಅಲ್ಲವೆಂದು ಸಾಧಿಸಹೊರಟ ಈತನಿಗೆ ಸಿಗುವುದಾದರೂ ಏನು ? ಅದೇ ಹಿಂದೂವಿರೋಧಿ ಮನಸುಗಳ ಬೂಟು ನೆಕ್ಕುವ ಸೌಭಾಗ್ಯವೇ ತಾನೇ ? ಅದನ್ನು ಬೇರೆ ರೀತಿಯಲ್ಲಿ ಮಾಡಿಕೊಂಡು ಯಾವುದಾದರೊಂದು ಪ್ರಶಸ್ತಿ ಪಡೆದುಕೊಂಡು ಹಾಯಾಗಿ ಇರಬಾರದೇ ಮಹನೀಯ !

ಶ್ರೀರಾಮ ಶಂಬೂಕನನ್ನು ಹೊಡೆದದ್ದೇ ಒಂದು ಸಾಧನೆ ಎಂದು ವ್ಯಂಗ್ಯವಾಡುವ ಈತನಿಗೆ ಶಂಬೂಕನಾಗಲಿ ಅಥವಾ ಬೇರೆ ರಾಕ್ಷಸರಾಗಲಿ ದುಷ್ಟಶಕ್ತಿಗಳಾಗಿ ಕಾಣದೇ ದಲಿತ, ಹಿಂದುಳಿದ ವ್ಯಕ್ತಿಗಳಾಗಿ ಕಾಣುವುದೇ ದುರಂತ. ಈಗ ನಮ್ಮ ಯೋಧರ ಬಗ್ಗೆ, ಮೋದಿಯವರ ಬಗ್ಗೆ ಮಾತನಾಡುವ ಜನರ ಮನಸ್ಥಿತಿಯೂ ಇದೇ ಆಗಿದೆ. ಭಯೋತ್ಪಾದಕರು ದುಷ್ಟಶಕ್ತಿಗಳಂತೆ ಇವರಿಗೆ ಕಾಣುವುದಿಲ್ಲ ಹೊರತಾಗಿ ಅವರು ತಮಗೆ ಲಾಭ ತಂದುಕೊಡುವ ಒಂದು ವರ್ಗದ ಜನರಾಗಿ ಕಾಣಿಸುತ್ತಾರೆ. ನೇರವಾಗಿ ಅವರ ಪರ ಮಾತನಾಡದೇ ಯೋಧರನ್ನೋ ಅಥವಾ ಮೋದಿಯವರನ್ನೋ ತೆಗಳತೊಡಗುತ್ತಾರೆ. ದೇಶದ ರಕ್ಷಣೆ ಇವರಿಗೆ ಬೇಕಾಗಿಲ್ಲ. ಸ್ವಹಿತ ರಕ್ಷಣೆಯಷ್ಟೇ ಇವರ ಅಜೆಂಡಾ. ನಿಜವಾಗಿಯೂ ಇವರೇ ಸಮಾಜವಿರೋಧಿಗಳೆಂಬುದರಲ್ಲಿ ಯಾವುದೇ ಸಂದೇಹವಿಲ್ಲ.
-ಉಮೇಶ ಬೆಳಕೂಡ, ಮೂಡಲಗಿ

Comments