UK Suddi
The news is by your side.

ಕಾರಡಗಿ ಕಾರಣಿಕ :”ಆಕಾಶ ದೊಳಗಿರುವ ಸರ್ವರಿಗೂ ಅನ್ನವಾಗಿತು ಬಹುಪರಾಕ್ “

ಸವಣೂರು ತಾಲೂಕು ಕಾರಡಗಿ ಶ್ರೀ ವೀರಭದ್ರೇಶ್ವರ ಕ್ಷೇತ್ರದ ಕಾರ್ಣಿಕೋತ್ಸವ ಕಾರ್ಯಕ್ರಮ ಇಂದು ರಾತ್ರಿ ಜರುಗಿತು .

ಕಾರಡಗಿ ಕಾರಣಿಕ “ಆಕಾಶ ದೊಳಗಿರುವ ಸರ್ವರಿಗೂ ಅನ್ನವಾಗಿತು ಬಹುಪರಾಕ್ “.

ಕಾರಡಗಿ ಗ್ರಾಮದ ಕುಲಕರ್ಣಿ ಮನೆತನದ ನಿಂಗಣ್ಣರಾವ್ ಕುಲಕರ್ಣಿ ಅವರು ನಿರಂತರವಾಗಿ ಮುವತ್ತು ಎರಡು ವರ್ಷಗಳಿಂದ ಕಾರ್ಣಿಕವನ್ನು ಹೇಳುತ್ತಾರೆ….
ಶ್ರೀಕ್ಷೇತ್ರದಲ್ಲಿ ವಿಜಯದಶಮಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು…
ನಂತರ ಜಿಲ್ಲಾ ಕಲಾ ಬಳಗ ಹಾವೇರಿ ಅವರಿಂದ ಹಾಸ್ಯ ಮತ್ತು ಜಾನಪದ ಕಾರ್ಯಕ್ರಮ ಮತ್ತು ಶ್ರೀ ವೀರಭದ್ರೇಶ್ವರ ಸಾಂಸ್ಕೃತಿಕ ಕಲಾತಂಡ ಹುರುಳಿಕುಪ್ಪಿ ಇವರಿಂದ ಜಾನಪದ ಹಾಗೂ ಮಿಮಿಕ್ರಿ ಕಾರ್ಯಕ್ರಮಗಳು ಜರಗಿದವು .

Comments