UK Suddi
The news is by your side.

ಬಂಡಿವಾಡ ಗ್ರಾಮದಲ್ಲಿ ಬಾರಿ ಮಳೆಗೆ ಮನೆಗೆ ನುಗ್ಗಿದ ನೀರು.

ಧಾರವಾಡ:ಹುಬ್ಬಳ್ಳಿ ತಾಲೂಕಿನ ಭಂಡಿವಾಡ ಗ್ರಾಮದಲ್ಲಿ ಸತತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚಳ್ಳವನ ಕೆರೆಯಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿದ್ದು,ಇಲ್ಲಿನ ನಿವಾಸಿಗಳಿಗೆ ದೈನಂದಿನ ಚಟುವಟಿಕೆಗಳನ್ನು ನಡೆಸಲು ಗ್ರಾಮಸ್ಥರು ಪರದಾಡುವಂತಾಗಿದೆ.

ಇಲ್ಲಿನ ನಿವಾಸಿಗಳು ಹೇಳುವ ಪ್ರಕಾರ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಯಲ್ಲಿ ನೀರು ಹೊಕ್ಕು ಅಡುಗೆ ಮಾಡಲು ಆಗುತ್ತಿಲ್ಲ,ರಾತ್ರಿ ಹೊತ್ತು ಮಲಗಲು ಸಹ ಆಗುತ್ತಿಲ್ಲ ಎಂಬುದು ಇಲ್ಲಿನ ಜನರ ಅಳಲು.

ಸುದ್ದಿ ತಿಳಿದು ತಕ್ಷಣ ತಾಲೂಕು ತಹಸಿಲ್ದಾರರಾದ  ಶಶಿಧರ ಮಡ್ಯಾಳವರು ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಚೈತ್ರಾ ಶಿರೂರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಗ್ರಾಮದ ಜನರಿಗೆ ಪರ್ಯಾಯವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. 

ಇದೇ ಸಂದರ್ಭದಲ್ಲಿ ತಾಲೂಕ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಫಕ್ಕೀರವ್ವ ಹುಲ್ಲಂಬಿ ಸ್ಥಳೀಯ ಶಾಸಕರು ಸಂಬಂದಪಟ್ಟ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.

Comments