UK Suddi
The news is by your side.

ಮಾತ್ರಪೂರ್ಣ ಯೋಜನೆ ನೀಜವಾಗೀಯೂ ಪರಿಪೂರ್ಣವಾ?

ಪ್ರತಿದಿನ ಒಬ್ಬ ತುಂಬುಗರ್ಭಿಣಿ ೨ ರಿಂದ ೩ ಕೀಮಿ ನಡೆದಾಗಲಿ ಅಥವಾ ವಾಹನದ ಮೂಲಕವಾಗಲಿ ಅಂಗಣವಾಡಿಗೆ ಹೊಗಲು ಸಾದ್ಯವಾ? ಒಂದೊತ್ತಿನ ಊಟಕ್ಕೆ ಅಂಗಣವಾಡಿಗೆ ಅಲೆಯುವಷ್ಟು ಬಡವರಾ ನಮ್ಮ ರೈತಾಪಿ ಜನ? ಮೊದಲು ಕೊಡುತ್ತಿದ್ದ ರೆಷನ್ನನ್ನ ನಿಲ್ಲಿಸಿ ಸಿದ್ದ ಆಹಾರ ಕೊಟ್ಟರೆ ಇವರ ಲೆಕ್ಕದಷ್ಟು ಜನ ಊಟ ಮಾಡದೇ ಇದ್ದರೆ ಉಳಿದ ಊಟ ಏನು ಮಾಡಬೇಕು? ಇದೊಂದು ಅಂಗಣವಾಡಿ ಕಾರ್ಯಕರ್ತೆಯರಿಗೆ ಲಾಭ ಮಾಡಿಕೊಡುವ ಯೋಜನೆ ಅಂತ ಅನ್ನಿಸಿಕೊಳ್ಳೊದಿಲ್ವ? ತಿಂಗಳಿಗೆ ೧೫೦ ಕೋಟಿ ದುಡ್ಡು ಯಾರದ್ದು? ಬಾನಂತಿಯರು ವಿಶ್ರಾಂತಿ ತೆಗೆದುಕೊಳ್ಳದೆ ಒಂದೊತ್ತಿನ ಊಟಕ್ಕೆ ಅಲೇದಾಡಬೇಕಾ? ಮನೇಯವರೇ ಹೊಗಿ ಊಟ ತರಬೇಕು  ಅಂದ್ರೇ ಅವ್ರಿಗೆ ಬೆರೆ ಕೆಲಸ ಇರೊದಿಲ್ವಾ? ಇಂತ ತಲೆಕೆಟ್ಟ ಯೋಜನೆಯನ್ನ ಜಾರಿಗೆ ತಂದವ್ರನ್ನ ಹಾಗೂ ಬೆಂಬಲಿಸುವವರನ್ನ ಏಂತ ಶಬ್ದಗಳಲ್ಲಿ ಖಂಡಿಸಬೇಕು? 

ಯಾವುದೆ ಯೊಜನೇಗಳಾಗಲಿ ಮತಗಳ ಲೇಕ್ಕಾಚಾರದಲ್ಲಿ ಜಾರಿಗೆ ತಂದರೆ,ಇದೆ ರೀತಿ ಆವಾಂತರಗಳಿಂದ ಕೂಡಿರುತ್ತವೆ. ಅವೇ ಯೊಜನೆಗಳನ್ನ ಜನಪರವಾದ ದ್ರಷ್ಟಿಕೊನದಿಂದ ಜಾರಿಗೆ ತಂದರೇ ಅವುಗಳು ಯಾವಾಗಲು ಜನಪ್ರೀಯವಾಗಿರುತ್ತವೆ. 

ಇನ್ನೊಂದು ಸಂಗತಿಯನ್ನ ಹೆಳಬೇಕೆಂದರೆ,ಪಶ್ಚಿಮ ಘಟ್ಟ ಪ್ರದೇಶದ ಮಹೀಳೆಯರು,ಬೆಟ್ಟ ಪ್ರದೇಶದಲ್ಲಿ ವಾಸ ಮಾಡುವ ಮಹಿಳೆಯರು,  ಉತ್ತರ ಕರ್ನಾಟಕದಾದ್ಯಂತ ತೊಟಗಳಲ್ಲಿ ವಾಸ ಮಾಡುವ ಮಹಿಳೆಯರು, ದಿನಾಲು ಅಂಗಣವಾಡಿಗೆ ಹೇಗೆ ಹೊಗುವುದು? ಅಂತ ಸರಕಾರ ವಿಚಾರ ಮಾಡಿದಂತೆ ಕಾಣುವುದಿಲ್ಲ. ಅಕಸ್ಮಾತ ಅವ್ರು ಹೊದಾಗ ಕಾಡುಪ್ರಾಣಿಗಳು ದಾಳಿ ಮಾಡಿದರೆ? ಇಲ್ಲ ಯಾವುದೆ ಅಪಘಾತ ವಾದರೆ ಯಾರು ಹೊಣೆ? 
 

ಇಂತ ಏಡಬಿಂಗಿ ಯೋಜನೆಯನ್ನು ಬೆಂಬಲಿಸುವವರು, ನಿಜವಾಗಲು ಒಬ್ಬ ಗರ್ಭಿಣಿಯ ತೊಂದರೆ ಹಾಗೂ ಅವಳ ಮಾನಸಿಕ ಸ್ತೀತಿ, ಅವಳ ಪರೀಸ್ತಿತಿ, ದೈಹಿಕ ಶಕ್ತಿ ಯ ಬಗ್ಗೆ ಅರಿವಿಲ್ಲದವರೆಂದು ಹೆಳಬೆಕಾಗುತ್ತದೆ ಅಲ್ವೆ?

-ಪುರಂದರ.

Comments