UK Suddi
The news is by your side.

ಉತ್ತರ ಕರ್ನಾಟಕ ಹೋರಾಟ ಸಮಿತಿ ಮಂಟೂರ ಘಟಕದ ಅಧ್ಯಕ್ಷರಾಗಿ ವಿಠ್ಠಲ ಗಿರಗಾವಿ ಆಯ್ಕೆ.

ಬಾಗಲಕೋಟ:ಉತ್ತರ ಕನಾ೯ಟಕ ಹೋರಾಟ ಸಮಿತಿಯ ಮಂಟೂರ ಗ್ರಾಮ ಘಟಕದ ಅಧ್ಯಕ್ಷರಾಗಿ ವಿಠ್ಠಲ ಗಿರಗಾವಿ ಆಯ್ಕೆಯಾಗಿದ್ದಾರೆ. 
ಇತ್ತೀಚೆಗೆ ಗ್ರಾಮದ ವಿಠ್ಠಲ ಮಂದಿರದಲ್ಲಿ ಕರೆಯಲಾದ ವಿಶೇಷ ಸಭೆಯಲ್ಲಿ ಆಯ್ಕೆ ಮಾಡಲಾಯಿತು. 

ಸಭೆಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಮಾಜಿ ಸೈನಿಕರ ಘಟಕದ ಸಂಚಾಲಕ ನಿವೃತ್ತ ಮಿಲಿಟರಿ ಸುಬೇದಾರ ಶ್ರೀಶೈಲ ಪಸಾರ, ರಾಜ್ಯ ಘಟಕದ ಪ್ರಧಾನ ಕಾಯ೯ದಶಿ೯ ನಾಗೇಶ ಗೋಲಶೆಟ್ಟಿ, ಖಜಾಂಚಿ ನೀಲೇಶ ಬನ್ನೂರ, ತಾಲೂಕಾ ಘಟಕದ ಉಪಾಧ್ಯಕ್ಷ ಶ್ರೀಮತಿ ಸ್ನೇಹಾ ಹಿರೇಮಠ, ವಂದನಾ ಕುಲಕಣಿ೯, ಕೇಶವ ಸಾರವಾಡ, ಮುಧೋಳ ತಾಲೂಕಾ ವಿದ್ಯಾಥಿ೯ ಘಟಕದ ಅಧ್ಯಕ್ಷ ಸೋಮಲಿಂಗ ಜಗದಾಳ ಗ್ರಾಮದ ಪ್ರಮುಖರಾದ ಅಶೋಕ ಮೆಟಗುಡ್ಡ, ಗೋಲಪ್ಪಾ ಗೋಲಶೆಟ್ಟಿ, ಸದಾಶಿವ ಮೆಟಗುಡ್ಡ, ಶಿವಾನಂದ ನಾಗಮೋತಿ, ಶಿವು ಉದಂಡ, ಸಚಿನ್ ಉಳ್ಳಾಗಡ್ಡಿ, ರಮೇಶ ಮೂಲಿಮನಿ,ಈರಣ್ಣಾ ಬೀಳಗಿ, ಮಲ್ಲಪ್ಪಾ ಮೆಟಗುಡ್ಡ, ಸಚಿನ್ ಮೂಲಿಮನಿ, ಶಂಕರ ಒಂಟಗೋಡಿ, ಮಂಜು ಮದರಖಂಡಿ, ಅನಿಲ ಬಿಸನಾಳ, ಸಂಗಮೇಶ ಸಿದಗೊಂಡ, ವೀರಭದ್ರ ಗೋಲಶೆಟ್ಟಿ ಮುಂತಾದವರು ಹಾಜರಿದ್ದರು.

Comments