UK Suddi
The news is by your side.

ಬೆಳಗುವ ದೀಪವಾಗಬೇಕು ಮನ!!

ಬೆಳಗುವ ದೀಪವಾಗಬೇಕು ಮನ!!

ಕಾಳ್ಗಿಚ್ಚಿನ ಕೂಪವಾಗಬಾರದು ತನು!!

ನಾನೆನ್ನಲು ನೀನಾಗಿರಬೇಕು !!

ನೀನೆನ್ನಲು ನಾನಾಗಿರಬೇಕು !!

ನಗಲಾರದವನಿಂದ ನಗು ಬಯಸಬೇಡ !!

ಅಳುವವನಿಂದ ಅಳುವುದ ಕಲಿಯಬೇಡ?!!

ತನ್ನ ತನವ ಅರಿಯದ ಜನರ ಮಾತಿಗೆ ಕಿವಿಗೊಡಬೇಡ !!

ಆಚಾರವಿಲ್ಲದವರಿಗೆ ಬುದ್ದಿ ಹೇಳಲುಬೇಡ !!

ವಿಶ್ವಾಸದಲ್ಲಿ ಮರುಳಾಗಬೇಡ!!

ಹೊಗಳಿಕೆಗೆ ಬಾಯಿಬಿಡಬೇಡ!!

ತೆಗಳಿಕೆಗೆ ಕುಗ್ಗಿ ಸೋಲಬೇಡ !!

ಕನಿಕರವ  ಬಿಡಬೇಡ …ಕಲಿತ ಜೀವನದ ಪಾಠವ ಮರೆಯಬೇಡ !!

ಮನುಷ್ಯನಾಗಿ ಹುಟ್ಟಿದಮೇಲೆ ಮಾನವತೆ ಮರೆಯದಿರು!!

ನಿನ್ನ ಸುತ್ತು ಮುತ್ತಲಿನ ಜನರ ರೀತಿನೀತಿಯ ಅರಿತಿರು !!

ಯಾಮಾರಿ ಸೋಮಾರಿಯಾದರೆ ನಿನ್ನ ಮನವು ತನುವು ನಿನ್ನಿಂದ ದೂರಾಗಿ … ಅನ್ಯರ ಪಾಲಾಗಿ ಮೇಲೇಳದ  ಕಂದಕಕ್ಕೆ ಬೀಳುವುದು ನನ್ನ ಗೆಳೆಯ / ಗೆಳತಿ

ಇರಲಿ ಜೀವನದ ವೇಗದಲ್ಲಿ  ಮಿತಿ…. ಯೋಚಿಸಿ ಯೋಗಿಸಿ….ಮುಂದಡಿ ಇಡಿ 

ಸಿಗಲಿ ನಿಮಗೆಲ್ಲ ಶಾಂತಿ ಸಮಾಧಾನದ ಬದುಕಿನ ಕೀರುತಿ 

.

❤ಪ್ರೀತಿ ಇಂದ ಪ್ರೀತಿಯ ❤

❤ಹಂಚ ಬೇಕು ಮಾನವ ❤

   ನಿಮ್ಮ ಅನಿಸಿಕೆಯನ್ನು ??

ಈ ವಾಟ್ಸ್ ಆಪ್ number ಗೆ ಕಳಿಸಿ 

೯೯೪೫೬೪೫೯೮೫ (9945645985)

     ??ಧನ್ಯವಾದಗಳೊಂದಿಗೆ ??

             ?ವಾಣಿ ಶೆಟ್ಟಿ ?

Comments