UK Suddi
The news is by your side.

ಯಾದಗಿರಿ:ಕರವೇ ವಿಧ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ನಾಯಕ್ ಅಯ್ಕೆ.

ಯಾದಗಿರಿ: ಜಿಲ್ಲೆಯ  ಕರ್ನಾಟಕ ರಕ್ಷಣಾ ವೇದಿಕೆಯ ವಿಧ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ನಾಯಕರವರನ್ನು ಹಾಗು ಜಿಲ್ಲಾ ಉಪಾಧ್ಯಕ್ಷರನ್ನಾಗಿ ರಾಘವೇಂದ್ರ ಕಲಾಲರವರನ್ನು ನೇಮಕಮಾಡಲಾಯಿತು.

ಯಾದಗಿರಿ ತಾಲ್ಲೂಕಿನ ಯರಗೋಳ ಹಾಗು ಮಲಕಪ್ಪನಳ್ಳಿ ಗ್ರಾಮ ಘಟಕದ  ಪದಾಧಿಕಾರಿಗಳನ್ನು ಕರವೇ ಹೈ.ಕ.ಅಧ್ಯಕ್ಷರಾದ ಶಂಕರಗೌಡ ಪಾಟೀಲರವರ ಆದೇಶದ ಮೇರೆಗೆ ಹೈ.ಕ.ಯು.ಘಟಕ ಅಧ್ಯಕ್ಷ ಬೀರೆಶ್ ಚಿರತೆನೂರ, ಹಾಗು ಯಾದಗಿರಿ ಜಿಲ್ಲಾಧ್ಯಕ್ಷ ಸಚಿನ್ ನಾಶಿಯವರ ನೇತೃತ್ವದಲ್ಲಿ ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಬಸವರಾಜ ದೊರೆ ದೇವು ಕುರುಕುಂದ,ಭಿಮು ಮಾನೆಗಾರ್,ಶಿವು ಜೆ,ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

Comments