ರೈತನ ಮೊಗದಲ್ಲಿ ಮಂದಹಾಸವಿಲ್ಲದ ಶಿಗೀ ಹುಣ್ಣಿಮೆ.
ನಾಡಿಗೆಲ್ಲ ಅನ್ನ ನಿಡುವ ಅನ್ನದಾತನ ಅತ್ಯಂತ ಸಡಗರದ ಹಬ್ಬವಾದ ಶಿಗೀಹುಣ್ಣಿಮೆ, ಈ ಹುಣ್ಣಿಮೆ ಬಂತೆಂದರೆ ಸಾಕು ಉತ್ತರ ಕರ್ನಾಟಕದ ರೈತನ ಕುಟುಂಭದಲ್ಲಿ ಸಂತಸ ಮನೆ ಮಾಡುತ್ತದೆ, ಆದರೆ ಈ ಭಾರಿ ಶಿಗೀಹುಣ್ಣಿಮೆ ರೈತನಿಗೆ ಸಂತದ ಮುಖ ಯಾಕೋ ಕಾಣುತ್ತಿಲ್ಲ.
ಪ್ರತಿವರ್ಷ ಮಾನಸೂನ ಮಳೆಯಾಗಿ ರೈತನ ಹೊಲ ಗದ್ದೆಗಳಲ್ಲಿ ಹಚ್ಚಹಸಿರಿನ ಸೀರೆಯನ್ನುಟ್ಟು ಭೂತಾಯಿ ಕಂಗೊಳಿಸುತ್ತಿದ್ದಳು, ರೈತರು ತನ್ನ ಸಹಪರಿವಾರವನ್ನು ಕರೆದುಕೊಂಡು ಸಂತಸದಿಂದ ಭೂತಾಯಿಗೆ ಉಡಿಯನ್ನು ತುಂಬಿ ರುಚಿಕಟ್ಟಾದ ಊಟವನ್ನು ಮಾಡಿ ಬರುತ್ತಿದ್ದರು.
ಆದರೆ ಸರಿಯಾದ ಸಮಯಕ್ಕೆ ಮುಂಗಾರಿನ ಮಳೆಯು ಆಗದೇ ಹೋದದ್ದರಿಂದ ರೈತನ ಹೊಲ್ ಗದ್ದೆಗಳಲ್ಲಿ ಬೀಜ ಬಿತ್ತನೆ ಕೂಡ ಮಾಡಿಲ್ಲ.ಉತ್ತರ ಕರ್ನಾಟಕದ ಸಾಕಷ್ಟು ಬಾಗದಲ್ಲಿ ಬಿತ್ತನೆ ಮಾಡದ್ದರಿಂದ ಹೊಲ ಗದ್ದೆಗಳೆಲ್ಲ ಬರಿದಾಗಿ ಕಾಣುತ್ತಿವೆ.
ಇತ್ತ ಇದ್ದ ಬದ್ದ ಭೂರವೆಲ್ಲನಿಂದ ನೀರು ಹಾಸಿ ಬೆಳೆಯನ್ನು ಬೆಳಸಬೇಕಂದರೆ ವಿದ್ಯುತ್ ಅಭಾವವಿದ್ದದ್ದರಿಂದ ಆ ಬೆಳೆಗಳು ಕೂಡಾ ಒಣಗುತ್ತಾ ಹೊರಟಿವೆ.
ರೈತರ ತಮ್ಮ ಸಂಪ್ರದಾಯ ಹಿಂದಿನಿಂದ ಬಂದಿರುವ ಈ ಹಬ್ಬವನ್ನು ಮಾಡುತ್ತಾ ಬಂದಿರುವ ಹಿರಿಯರು ಈ ಹಬ್ಬವನ್ನು ಬಿಡಬಾರದು ಎಂದು ರೈತರು ಶಿಗೀಹುಣ್ಣಿಮೆಗೆ ಮಾಡಬೇಕಾದ ಒಂದಷ್ಟು ಖರ್ಚಿಕಾಯಿ, ಹುರಕ್ಕಿಹೋಳಗಿ, ಸಜ್ಜಿ ಕಡಬು, ಪುಂಡಿಪಲ್ಯೆ, ವಡೆ, ಮೊಸರನ್ನ, ಗುರಳ್ಳಿ ಹಿಂಡಿ ಹೀಗೆ ಹಲವಾರು ತಿಂಡಿ ಪದಾರ್ಥವನ್ನು ತೆಗೆದುಕೊಂಡು ಹೋಗಿ ಭೂತಾಯಿಗೆ ಅರ್ಪಿಸಲು ಹೊರಟಿದ್ದಾರೆ.
ಮುಂಜಾನೆ ಒಂಬತ್ತು ಘಂಟೆಯಿಂದ ಮನೆಯವರೆಲ್ಲರೂ ಸೇರಿ ಚಿಕ್ಕ ಚಿಕ್ಕ ಮಕ್ಕಳ ಜೊತೆ ತಲೆಯ ಮೇಲೆ ಬುತ್ತಿ ಹೊತ್ತು ಹೊಲ ಗದ್ದೆ ಕಡೆಗೆ ಹೊರಟಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.
ಅದರ ಜೊತೆ ಜೊತೆಗೆ ಚಿಕ್ಕ ಮಕ್ಕಳು ಹೊಲ ಗದ್ದೆಗಳಲ್ಲಿ ನಿಂತು ಗಾಳಿಪಟ ಹಾರಿಸುವ ದೃಶ್ಯ ಕಂಡು ಬರುತ್ತಿದೆ.
ಒಟ್ಟಾಗಿ ಸಂಪ್ರದಾಯ ಬಿಡಬೇಡದು ಎನ್ನುವ ಉದ್ದೇಶದಿಂದ ಈ ಭಾರಿ ರೈತನ ಹಬ್ಬವಾದ ಶಿಗೀ ಹುಣ್ಣಿಮೆಗೆ ಕಳೆಇಲ್ಲದಂತೆ ಕಂಡು ಬರುತ್ತಿದೆ.
-ಗುರು ಎಸ್ ಎ..