UK Suddi
The news is by your side.

ಬೃಹತ್ತ್ ನೇಕಾರ ಸಮಾವೇಶಕ್ಕೆ ಹರಿದು ಬಂದ ಜನಸಾಗರ, ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆ ಕೂಗಿದ ಬಿ ಎಸ ಯಡಿಯೂರಪ್ಪ.

ಬಾಗಲಕೋಟ:ಬನಹಟ್ಟಿಯ ಎಸ್ ಆರ್ ಎ ಕಾಲೇಜು ಮೈದಾನದಲ್ಲಿ ಇಂದು ನಡೆದ ನೇಕಾರರ ಬೃಹತ್ ಸಮಾವೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ಎಸ್ ಯಡಿಯೂರಪ್ಪ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಬಿ ಎಸ್ ಯಡಿಯೂರಪ್ಪ ಅವರು

“ನಾನೆ ತೆರದಾಳ ಮತ ಕ್ಷೇತ್ರದ ಅಭ್ಯರ್ಥಿ ಎಂದು ತಿಳಿದು ಸಿದ್ದು ಸವದಿ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ತಂದು ಮತ್ತೊಮ್ಮೆ ತಮ್ಮೆಲ್ಲರ ಸೇವೆ ಮಾಡಲು ಅವಕಾಶ ನೀಡಬೇಕು.ನನ್ನ ಕ್ಷೇತ್ರವಾದ ಶಿಕಾರಿಪುರಕ್ಕಿಂತ ಹೆಚ್ಚಿನ ಆದ್ಯತೆಯನ್ನು ತೇರದಾಳ ಮತ ಕ್ಷೇತ್ರಕ್ಕೆ ನೀಡುತ್ತೇನೆ ಎಂದರು.ಕರ್ನಾಟಕ ರಾಜ್ಯ ಸರ್ಕಾರ ಇದ್ದು ಸತ್ತಂತಾಗಿದೆ,ರಾಜ್ಯದಲ್ಲಿ ಆಡಳಿತಾರೂಡ ಕಾಂಗ್ರೆಸ್ಸ್ ಸರ್ಕಾರ ಹಗಲು ದರೋಡೆ ಮಾಡ್ತಾ ಇದೇ,ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿ 100 ದಿನಗಳು ಕಳೆದರು ಕೂಡಾ ಇನ್ನು ವರೆಗೂ ಯಾವ ಒಬ್ಬ ರೈತನ ಸಹಕಾರಿ ಬ್ಯಾಂಕ್ ಖಾತೆಯಲ್ಲಿ 50000 ರುಪಾಯಿ ಜಮೆ ಆಗಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು,ನಮ್ಮ ಸರ್ಕಾರ ರಚನೆಯಾದ ಒಂದೂ ತಿಂಗಳ ಒಳಗೆ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ” ಎಂದು ಭರವಸೆ ನೀಡಿದರು.

ಸಮಾವೇಶದಲ್ಲಿ ನೇಕಾರರ ಸಾಲ ಮನ್ನಾ, ಕೂಲಿ ನೇಕಾರರ ಸಾಲ ವಿತರಣೆ ಬಗ್ಗೆ ಹಾಗೂ ನೇಕಾರರ ಮೂಲ ಸೌಲಭ್ಯಗಳ ಸಮಸ್ಯೆಗಳ ಕುರಿತು ಎಲ್ಲ ನಾಯಕರು ಚರ್ಚಿಸಿದರು,ಇದೇ ವೇಳೆ ಅನೇಕ ನೇಕಾರರು ತಮ್ಮ ತಮ್ಮ ಕುಂದು ಕೊರತೆಗಳನ್ನು ಪರಿಹರಿಸುವಂತೆ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಪಕ್ಷ ನಾಯಕರಾದ ಕೆ ಎಸ್ ಈಶ್ವರಪ್ಪ,ಕೇಂದ್ರ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ, ಪಿ ಸಿ ಗದ್ಡಿಗೌಡರ,ರಮೇಶ ಜೀಗಜಿನಗಿ,ಶ್ರಿ ರಾಮುಲು,ಶಾಸಕರಾದ ಗೋವಿಂದ್ ಕಾರಜೋಳ,ಪಿ ರಾಜೀವ್, ಲಕ್ಷ್ಮಣ ಸವದಿ, ಬಾಗಲಕೋಟ ಭಾಜಪ ಜಿಲ್ಲಾಧ್ಯಕ್ಷರಾದ ಸಿದ್ದು ಸವದಿ, ಮಾಜಿ ಶಾಸಕರಾದ ಶ್ರೀಕಾಂತ್ ಕುಲಕರ್ಣಿ, ನೇಕಾರ ನಾಯಕರಾದ ಮಲ್ಲಿಕಾರ್ಜುನ್ ಬನ್ನಿ,ಮನೋಹರ್ ಶಿರೋಳ ಸೇರಿದಂತೆ ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ನೇಕಾರರು,ರೈತರು,ಪಕ್ಷದ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Comments