UK Suddi
The news is by your side.

28ರಿಂದ  ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಸ್ಪರ್ಧೆ.

ಬಾಗಲಕೋಟ:ಜಮಖಂಡಿ ನಗರವು ಮತ್ತೊಮ್ಮೆ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಗಳಿಗೆ ಆತಿಥ್ಯ ವಹಿಸಿತ್ತಿದೆ. ಕನ್ನಡ ಸಂಘ ಜಮಖಂಡಿಯ ಸುವರ್ಣಮಹೋತ್ಸವ ಹಾಗೂ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಅಮೇಚುರ ಅಸೋಸಿಯೇಶನ್, ಬಾಗಲಕೋಟ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್ ಮತ್ತು ಕನ್ನಡ ಸಂಘಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 28.10.2017 ರಿಂದ 31.10.2017ರ ವರೆಗೆ ನಗರದಲ್ಲಿ 22ನೇಯ ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಗಳು ಜರುಗಲಿವೆ.
ಕರ್ನಾಟಕ ತಂಡದಿಂದ ವಿವಿಧ ಸ್ಪರ್ಧೆಗಳಲ್ಲಿ ಬಾಲಕ ಮತ್ತು ಬಾಲಕಿಯರು ಭಾಗವಹಿಸುತ್ತಿದ್ದು. ತರಬೇತಿ ಶಿಬಿರ ಪ್ರಾರಂಭದ ಸಂದರ್ಭದಲ್ಲಿ ಸ್ಪರ್ಧಾಳುಗಳನ್ನು ಇಂದು ಜಮಖಂಡಿ ಶಾಸಕರಾದ ಸಿದ್ದು ನ್ಯಾಮಗೌಡ ಭೇಟಿಯಾಗಿ ಶುಭ ಹಾರೈಸಿ ಪ್ರೋತ್ಸಾಹಿಸಿದರು.ನಂತರ ಮಾತನಾಡಿದ ಶಾಸಕ ಸಿದ್ದು ನ್ಯಾಮಗೌಡ ಅವರು “ಜಮಖಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರೀಕರ ಶುಭ ಹಾರೈಕೆ, ಬೆಂಬಲ ನಮ್ಮ ರಾಜ್ಯ ತಂಡಕ್ಕಿರಲಿ ಮತ್ತು ತಮ್ಮೆಲ್ಲರ ಸಹಾಯ, ಸಹಕಾರಗಳೊಂದಿಗೆ ಮತ್ತೊಮ್ಮೆ ರಾಷ್ಟ್ರಮಟ್ಟದ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಿ ಕ್ರೀಡಾ ಕ್ಷೇತ್ರದಲ್ಲಿ ಜಮಖಂಡಿ ನಗರದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯೋಣ” ಎಂದರು.

Comments