UK Suddi
The news is by your side.

ಎಮ್ ಕೆ ಹುಬ್ಬಳ್ಳಿಯ ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಯುವ ಜನತಾದಳ ಪಾಧಾದಿಕಾರಿಗಳ ನೇಮಕ.

ಬೆಳಗಾವಿ:ಇಂದು ಚೆನ್ನಮ್ಮನ- ಕಿತ್ತೂರ ವಿಧಾನ ಸಭೆಯ ಜ್ಯಾತ್ಯಾತೀತ ಯುವ ಜನತಾದಳದಿಂದ ಎಮ್ ಕೆ ಹುಬ್ಬಳ್ಳಿಯ ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಯುವ ಜನತಾದಳ ಪಾಧಾದಿಕಾರಿಗಳ ನೇಮಕ ಮಾಡಲಾಯಿತು.

ಪಟ್ಟಣ ಯುವ ಘಟಕದ ಪಧಾದಿಕಾರಿಗಳಾಗಿ ಕಾರ್ಯಾಧ್ಯಕ್ಷರಾಗಿ ಅಕ್ಷಯ ಜಮನಿಸ, ಉಪಾಧ್ಯಕ್ಷರಾಗಿ ಕಾರ್ತಿಕ ಯಲ್ಲಾಪುರಮಠ, ಪ್ರಧಾನ ಕಾರ್ಯದರ್ಶಿಯಾಗಿ ಸಾಗರ ಬೋಗಾರ, ಸಹಕಾರ್ಯದರ್ಶಿಯಾಗಿ ಸಚೀನ ಗಣಾಚಾರಿ, ಸಂಘಟನಾ ಕಾರ್ಯದರ್ಶಿಯಾಗಿ ಸುನೀಲ ನಾಡಗೌಡ್ರು  ಹಾಗು ವಿಶಾಲ ಸಂಪಗಾರ ರವರು ಪಧಾದಿಕಾರಿಗಳಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ಹಲವಾರು ಯುವಕರು ಜೆಡಿಎಸ್ ಗೆ ಸೇರಿದರು.

ಕಿತ್ತೂರ ವಿಧಾನ ಸಭೆಯ ಯುವ ಘಟಕದ ಕಾರ್ಯಾಧ್ಯಕ್ಷರಾದ ರುದ್ರಪ್ಪ ಕಂಕಣವಾಡಿ, ಉಪಾಧ್ಯಕ್ಷರಾದ  ವಿಶಾಲ ವಾಲಿ, ಕಾರ್ಯದರ್ಶಿಯಾದ ಸಂತೋಷ ಸಂಬಣ್ಣನ್ನವರ ಹಾಗು ಸಮೀರ ಪಟೇಲ್,ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರ ಲೋಕುರ ಭಾಗವಹಿಸಿದ್ದರು.

Comments