ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಅವುಗಳ ಅಸ್ತಿತ್ವ ಉಳಿಸಬೇಕು:ಮುರುಗೇಶ್ ನಿರಾಣಿ.
ಬಾಗಲಕೋಟ: ಇಂದಿನ ಕಂಪ್ಯೂಟರ್ ಯುಗದಲ್ಲಿ ಗ್ರಾಮೀಣ ಭಾಗದಲ್ಲಿ ಕ್ರೀಡೆಗಳು ಮರೆಯಾಗುತ್ತಿರುವುದು ವಿಷಾದಕರ ಸಂಗತಿ. ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಅವುಗಳ ಅಸ್ತಿತ್ವ ಉಳಿಸಬೇಕು ಎಂದು ಎಂ ಆರ್ ಎನ್ ಪೌಂಡೇಶನ್ ಸಂಸ್ಥಾಪಕರಾದ ಮುರುಗೇಶ್ ನಿರಾಣಿ ಅವರು ಹೇಳಿದರು.
ಇಂದು ಕಲಾದಗಿಯ ಪ್ರೇಂಡ್ಸ್ ಸ್ಪೋರ್ಟ್ಸ ಕ್ಲಬ್ ವತಿಯಿಂದ ಹಮ್ಮಿಕೊಂಡ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿಗಳನ್ನು ಉದ್ಘಾಟಿಸಿ ಅವರು ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದರು .
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆತ್ಮಬಲ, ನಾಯಕತ್ವ, ಗುರಿ ಸಾಧಿಸುವ ಛಲ ನಮ್ಮಲ್ಲಿ ಬೆಳೆಯತ್ತದೆ. ಆದ್ದರಿಂದ ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕಾರ ಮಾಡಬೇಕು. ಪ್ರತಿಯೊಬ್ಬ ಆಟಗಾರರು ಕ್ರೀಡಾ ನಿರ್ಣಾಯಕರ ನಿರ್ಣಯಕ್ಕೆ ತಲೆಬಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಮುರುಗೇಶ್ ನಿರಾಣಿ ಅವರು ಕ್ರೀಡಾಪಟುಗಳನ್ನು ಸನ್ಮಾನಿಸಿದರು.
ಗ್ರಾಮದ ಹಿರಿಯರು,ಕ್ರೀಡಾಪಟುಗಳು,ಗಣ್ಯ ಮಾನ್ಯರು ಉಪಸ್ಥಿತರಿದ್ದರು.