ಇಲ್ಲಿ ಸೂರ್ಯಕಾಂತಿ ಜತೆಗೆ ಸೆಲ್ಫಿ ತೆಗೆದುಕೊಳ್ಳಬೇಕಿದ್ದರೆ ಒಬ್ಬರಿಗೆ ರೂ.20 ಕೊಡಬೇಕು
ಗುಂಡ್ಲುಪೇಟೆ ತಾಲೂಕು ಬೇಗೂರು ಗ್ರಾಮದ ರೈತರೊಬ್ಬರು ಹೊಸ ಆದಾಯ ಮೂಲ ಕಂಡುಕೊಂಡಿದ್ದಾರೆ. ವಿಶೇಷ ಎಂದರೆ ಇವರ ಜಮೀನು ಇರುವುದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ. ಹಾಗಾಗಿ ಈ ಹೆದ್ದಾರಿಯಲ್ಲಿ ಓಡಾಡುವವರು ಸೂರ್ಯಕಾಂತಿ ಹೂವು ನೋಡಿ ಗಾಡಿ ಸೈಡಿಗೆ ಹಾಕುತ್ತಾರೆ. ಒಬ್ಬೊರಿಗೆ ಇಂತಿಷ್ಟು ಅಂತ ರೇಟ್ ಫಿಕ್ಸ್…ಹಣ ಕೊಟ್ಟು…ಫೋಟೋ ತಗೋ ಬಹುದು.
ಇವರ ತೋಟದಲ್ಲಿ ಸೂರ್ಯಕಾಂತಿ ಜತೆಗೆ ಸೆಲ್ಫಿ ತೆಗೆದುಕೊಳ್ಳಬೇಕಿದ್ದರೆ ಒಬ್ಬರಿಗೆ ರೂ.20 ಕೊಡಬೇಕು. ಅದರಲ್ಲೂ ರಂಜಾನ್ ಹಬ್ಬದ ಪ್ರಯುಕ್ತ ಕೇರಳ, ಊಟಿಗೆ ಓಡಾಡುವವರ ಸಂಖ್ಯೆ ಹೆಚ್ಚಾಗಿದ್ದ ಕಾರಣ ಒಮ್ಮೆ ಹತ್ತಿಪ್ಪತ್ತು ವಾಹನಗಳು ನಿಲ್ಲಿಸುವುದು, ತೋಟಕ್ಕೆ ಲಗ್ಗೆ ಹಾಕುವುದು ಮಾಡುತ್ತಿದ್ದರು. ಇದನ್ನು ತಡೆಯಲು…ತೋಟಕ್ಕೆ ಹೋಗಿ ಸೆಲ್ಫಿ ತೆಗೆದುಕೊಳ್ಳುವವರಿಗೆ ರೂ.20 ನಿಗದಿ ಮಾಡಿ ಬೋರ್ಡ್ ಫಿಕ್ಸ್ ಮಾಡಿದ. ಆಗ ನೋಡಿ ಬೇಕಿದ್ದವರು ಮಾತ್ರ ಹೊಲಕ್ಕೆ ಅಡಿಯಿಡುತ್ತಿದ್ದರು. ರೈತನಿಗೂ ಹೊಸ ಆದಾಯ ಮೂಲ ಸಿಕ್ಕಂತಾಯಿತು. ಹೇಗಿದೆ ಪ್ಲಾನು. ಕೇವಲ ಸೆಲ್ಫಿಯಿಂದಲೇ ರೂ.40 ಸಾವಿರ ಆದಾಯ ಬಂದಿದೆಯಂತೆ. ಸೆಲ್ಫಿ ಕ್ರೇಜ್ನಿಂದ ರೈತನಿಗೆ ಒಳ್ಳೆಯ ಆದಾಯ ಬಂದಿದ್ದು ಅವರು ಸಹಜವಾಗಿಯೇ ಖುಷಿಯಾಗಿದ್ದಾರೆ.
Credits: APTG