UK Suddi
The news is by your side.

ಅಮೃತ್ ಸಿಟಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ ಕರಡಿ ಸಂಗಣ್ಣ  

ಕೊಪ್ಪಳ:​ ಕೇಂದ್ರ ಸರಕಾರದ ಕನಸಿನ ಕೂಸಾದ ಅಮೃತ್ ಸಿಟಿ ಯೋಜನೆ ಕಾಮಗಾರಿಗೆ ಗಂಗಾವತಿಯಲ್ಲಿ ಇಂದು ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣ  ಹಾಗು ಎಲ್ಲಾ ನಗರಸಭೆ  ಸದ್ಯಸರಿಂದ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಒಟ್ಟು 110 ಕೋಟಿ ವೆಚ್ಚದಲ್ಲಿ ನಗರದಲ್ಲಿ ಸಮರ್ಪಕ ಕುಡಿಯುವ ನೀರು,ಒಳಚರಂಡಿ ವ್ಯವಸ್ಥೆ ,ಮಳೆ ನೀರು ಚರಂಡಿ,ಸಾರ್ವಜನಿಕ ಉದ್ಯಾನವನ ಅಭಿರುದ್ದಿ,ಫುಟ್ಪಾತ್ ನಿರ್ಮಾಣ,ಹಾಗು ವಾಹನಗಳ  ಪಾರ್ಕಿಂಗ್ ವ್ಯವಸ್ಥೆಗಾಗಿ ಹಣವನ್ನು ವಿನಿಯೋಗಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಗಂಗಾವತಿಯ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು ,ಕನಕಗಿರಿಯ ಮಾಜಿ ಶಾಸಕರಾದ ಜಿ ವೀರಪ್ಪನವರು ,ಜಿಲ್ಲಾ ಅಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳವರು, ನರಸಭೆಯ ಅಧಿಕಾರಿಗಳು ಹಾಗು ಕಾರ್ಯಕರ್ತರು,ಸಾರ್ವಜನಿಕರು ಉಪಸ್ಥಿತರಿದ್ದರು.

Comments