UK Suddi
The news is by your side.

ಇಂದಿನಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ.

ಬೆಳಗಾವಿ:ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಬೆಳಗಾವಿ ಜಿಲ್ಲಾ ಆಡಳಿತ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಸುವ ಚೆನ್ನಮ್ಮನ ಕಿತ್ತೂರ ಉತ್ಸವ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಕಿತ್ತೂರ ಉತ್ಸವಕ್ಕೆ ಚೆನ್ನಮ್ಮ ಕಿತ್ತೂರು ನಗರ ಸಿದ್ಧವಾಗಿದೆ.ಇಲ್ಲಿನ ಕೋಟೆ ಆವರಣ ಮದುವನ ಗಿತ್ತಿಯಂತೆ ಶೃಂಗಾರಗೊಂಡಿದೆ.
ನೂರಾರು ಯುವ ಕಲಾವಿದರ ಕಲೆ-ಪ್ರತಿಭೆಗಳ ಪ್ರದರ್ಶನಕ್ಕೆ ವಿಶಾಲವಾದ ವೇದಿಕೆ ಸಜ್ಜಾಗಿದೆ,ಇನ್ನು ಸ್ಥಳಿಯ ಕಲಾವಿದರಿಗೆ ಈ ವರ್ಷದ ಉತ್ಸವದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎನ್ನಲಾಗಿದೆ.

ಬೃಹತ್ ವೇದಿಕೆ ಎದುರು 140 ಅಡಿ ಅಗಲ ಹಾಗು 260 ಅಡಿ ಉದ್ದದ ವಿಶಾಲವಾದ ರಂಗಮಂಟಪ ಬಿಳಿ ಹಾಗು ನೀಲಿ ವರ್ಣದ ಬಟ್ಟೆಯಿಂದ ಸುತ್ತಿನಿಂದ ಆಕರ್ಷಣೆ ಮಾಡುತ್ತಿವೆ, ಸರಿ ಸುಮಾರು 12000 ಕುರ್ಚಿಗಳನ್ನು ವೇದಿಕೆ ಮುಂಭಾಗದಲ್ಲಿ ಪ್ರೇಕ್ಷಕರಿಗಾಗಿ ಹಾಕಲಾಗಿದೆ.

ಕಿವಿಗೆ ಇಂಪು ತರಲು ಅತ್ಯಾಧುನಿಕ ಸೌಂಡ್ ಸಿಸ್ಟಮ್ ಅಳವಡಿಸಲಾಗಿದೆ. ಕೋಟೆ ಆವರಣ,ಗಿಡ ಮರಗಳು ವಿನೂತನ ವಿದ್ಯುತ್ ದೀಪಗಳಿಂದ ಅಲಂಕಾರಗೋಂಡಿವೆ.

ಇನ್ನು ಈ ಸಲದ ಉತ್ಸವಕ್ಕೆ 70 ವ್ಯಾಪಾರ ಮಳಿಗೆಗಳು ಹಸಿರು ಬಣ್ಣದ ಕಾರ್ಪೆಟನಿಂದ ಗ್ರಾಹಕರನ್ನು ಸೆಳೆಯಲು ಸಜ್ಜಾಗಿವೆ.

ಉತ್ಸವದ ಮುಖ್ಯ ಆಕರ್ಷಣೆಯಾದ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ಪ್ರದರ್ಶನಕ್ಕೆ ಈಗಾಗಲೇ ಸಜ್ಜಾಗಿವೆ.

ಚೆನ್ನಮ್ಮಾಜಿ ಬಾಲ್ಯ,ಯೌವ್ವನ,ಹೋರಾಟ, ಅಂತ್ಯ ಈ ಕುರಿತು ಇತಿಹಾಸ ಸಾರುವ ಕಾರ್ಯಕ್ರಮ ಈ ಸಲ ಆಕರ್ಷಕವಾಗಿ ಪ್ರದರ್ಶನಗೊಳ್ಳುವ ನಿರೀಕ್ಷೆಯನ್ನು ಎಲ್ಲರಲ್ಲೂ ಇಮ್ಮಡಿಗೋಳಿಸಿದೆ.

ಮಕ್ಕಳ ಚಂದ ಚಂದದ ಆಟಿಕೆ ಸಾಮಾನು ವ್ಯಾಪಾರಿಗಳು,ಸೀರೆ, ಬಳೆ ವ್ಯಾಪಾರಿಗಳು ಕಳೆದ ಎರಡು ದಿನಗಳಿಂದ ಇಲ್ಲಿ ಬಿಡು ಬಿಟ್ಟು ವ್ಯಾಪಾರ ಶುರು ಮಾಡಿದ್ದಾರೆ.

ಅದೇನೇ ನಿಮ್ಮ ಕೆಲಸ ಕಾರ್ಯ ಇರಲಿ ಇತಿಹಾಸ ಸಾರುವ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವಕ್ಕೆ ಬಿಡುವು ಮಾಡಿಕೊಂಡು ಎಲ್ಲರೂ ಬನ್ನಿ..

-ಗುರು ಎಸ್ ಎ..

Comments