UK Suddi
The news is by your side.

ಜಪಾನ್ ಚುನಾವಣೆ: ಪ್ರಧಾನಿ ಶಿಂಜೊ ಅಬೆ ಜಯಭೇರಿ, ಶುಭಕೋರಿದ ಮೋದಿ

ಟೋಕಿಯೊ: ಜಪಾನ್‌ನಲ್ಲಿ  ನಡೆದ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ಶಿಂಜೊ ಅಬೆ ಅವರು  ಜಯ ಸಾಧಿಸಿದ್ದಾರೆ.

ಸಂಸತ್ತಿನ 465 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಮೈತ್ರಿಕೂಟವು 312 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ದೇಶದಲ್ಲಿ ದೀರ್ಘಕಾಲ ಆಡಳಿತ ಚುಕ್ಕಾಣಿ ಹಿಡಿಯಲಿರುವ ಶ್ರೇಯ ಅಬೆ ಅವರಿಗೆ ಸಲ್ಲಲಿದೆ.

ಜಯ ಸಾಧಿಸಿದ ಪ್ರಧಾನಿ ಶಿಂಜೊ ಅಬೆ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್‌ ಭಾಷೆಯ ಮೂಲಕ ಶುಭ ಕೋರಿ ಟ್ವೀಟ್‌ ಮಾಡಿದ್ದಾರೆ.

Comments