UK Suddi
The news is by your side.

ಅನುಮಾನದ ಅವಮಾನ

ಅನುಮಾನದ ಕರಿನೆರಳಲ್ಲಿ ದುಡಿಯುತಿಹ ಗೆಳತಿಯರೆ 

ನೊಂದು ಬೆಂದು ಗಂಡ ಮಕ್ಕಳಿಗಾಗಿ ನಿ ಹೊಸ್ತಿಲ ದಾಟಿ ದುಡಿದು ಅನ್ನವ ನೀಡಿ ಆಸರೆಯಾದರು . ಎಲುಬಿಲ್ಲದ ನಾಲಿಗೆಯಿಂದ ಕಟುನುಡಿಯ ಆಡಿದನು .ನಿನ್ನ ಅನುಮಾನಿಸಿದನು ನಿಂತರು ತಪ್ಪು ಕುಂತರು ತಪ್ಪೆನ್ನುತಲಿ ನರಳಿಸಿದನು.  

ತನ್ನ ಮನದ ಕೊಳಕು ತನವ ನಿನ್ನಲ್ಲಿ ಹುಡುಕುತಲಿ .ದಂಡಪಿಂಡಗಳಂತೆ ಕುಡಿದು ದಾರಿಯಲ್ಲಿ ಕುಳಿತು ಅವಿವೇಕಿಗಳ ಸ್ನೇಹದಲಿ ಮೈಮರೆತು ತನ್ನ ಮನೆಯ ಮರ್ಯಾದೆಯನ್ನು ಬೀದಿಯಲಿ ಹರಾಜುಮಾಡುತ ಕಾಲ ಕಳೆದನು..ಮನವಿಲ್ಲದ ಮನಸಲ್ಲಿ ನಂಬಿಕೆಗೆ ನೆಲೆ ಎಲ್ಲಿ . ದುಡಿಯದ ಗಂಡಸರಿಗೆ ಬೆವರಿನ ಬೆಲೆ ಎಲ್ಲಿ.  ಕೊಳೆತನೀರಿನ ಬಾವಿಯ ಕಪ್ಪೆಯಂತೆ ಅವರ ಜೀವನ .. ಸಮುದ್ರದಲ್ಲಿ ಹಿಜಾಡುವ ಧೈರ್ಯ ಅವರಿಗಿಲ್ಲವಮ್ಮ!!

ಗಂಡಾಗಿ ಗಂಡನಾಗಿ ಆಸರೆಯಾಗದವನಿಗೆ .. ಹೆಂಗಸರ  ಕೈಯಲ್ಲಿ ದುಡಿಸಿಕೊಂಡರು ಅವಮಾನಿಸಿ ಅನುಮಾನಿಸುವವನಿಗೆ   ಏಳುಗಜದ ಸೀರೆಕೊಟ್ಟು ಕೈಗಳಿಗೆ ಬಳೆಯನಿಟ್ಟು  ಹರಿಶಿನ ಕುಂಕುಮವನಿಟ್ಟು ಮಂಗಳಾರತಿಯ ಮಾಡಿರಮ್ಮ!!

ಮದುವೆಯ ಅರ್ಥಗೊತ್ತಿಲ್ಲದ ಇಂಥ ಗಂಡುಮಕ್ಕಳಿಗೆ ಗಂಡನಾಗುವ ಅರ್ಹತೆ ಇಲ್ಲವೇ ಇಲ್ಲವಮ್ಮ!!
.

.

❤ಪ್ರೀತಿ ಇಂದ ಪ್ರೀತಿಯ ❤

❤ಹಂಚ ಬೇಕು ಮಾನವ ❤

   ನಿಮ್ಮ ಅನಿಸಿಕೆಯನ್ನು ??

ಈ ವಾಟ್ಸ್ ಆಪ್ number ಗೆ ಕಳಿಸಿ 

೯೯೪೫೬೪೫೯೮೫ (9945645985)

     ??ಧನ್ಯವಾದಗಳೊಂದಿಗೆ ??

             ? ವಾಣಿ ಶೆಟ್ಟಿ ?

Comments