UK Suddi
The news is by your side.

ರೈಲ್ವೆ ಟಿಕೆಟ್ ಕಾಯ್ದಿರಿಸುವ ಅರ್ಜಿಯಲ್ಲಿ ತೃತೀಯಲಿಂಗಿಗಳಿಗೆ ‘T’ ಆಯ್ಕೆ ಸಾಧ್ಯತೆ

ನವದೆಹಲಿ: ರೈಲ್ವೆ ಮಂಡಳಿಯು ಟಿಕೆಟ್ ಕಾಯ್ದಿರಿಸುವ ಅರ್ಜಿಯಲ್ಲಿ ಇನ್ನುಮುಂದೆ ಪುರುಷ(‘M’), ಮಹಿಳೆ (‘F’) ರೀತಿಯಲ್ಲಿಯೇ ತೃತೀಯಲಿಂಗಿ(M/F) ಬದಲು ಕೇವಲ ‘T’ ಎನ್ನುವ ಆಯ್ಕೆ ನಮೂದಿಸಲಿದೆ.

ಪ್ರಸ್ತುತ ಟಿಕೆಟ್ ಕಾಯ್ದಿರಿಸುವಿಕೆ/ರದ್ದತಿ ಅರ್ಜಿಗಳಲ್ಲಿ ‘ತೃತೀಯಲಿಂಗಿ (M/F)’ ಎನ್ನುವ ಆಯ್ಕೆ ಇದೆ. ಆದರೆ ಇದನ್ನು ‘T’ ಎಂದು ಬದಲಾಯಿಸಲು ರೈಲ್ವೆ ಮಂಡಳಿ ಎಲ್ಲಾ ವಲಯಗಳಿಗೆ ಪತ್ರ ರವಾನಿಸಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತೃತೀಯಲಿಂಗಿಗಳಿಗೆ ಸಂಬಂಧಪಟ್ಟಂತೆ ವಿವಿಧ ವಿಷಯಗಳನ್ನು ಪರಿಶೀಲಿಸುತ್ತಿದೆ. ತೃತೀಯಲಿಂಗಿಗಳು ಮಸೂದೆ, 2016 ಅನ್ನು ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆ ನಡೆಸುತ್ತಿದೆ.

ಈ ಕುರಿತು ಸಚಿವಾಲಯ ಅಂತಿಮ ನಿರ್ಣಯ ಕೈಗೊಳ್ಳುವವರೆಗೆ ತೃತೀಯಲಿಂಗಿಗಳು ‘T’ ಆಯ್ಕೆ ಬಳಸಲು ಸಾಧ್ಯವಾಗುವಂತೆ ನಿಯಮ ರೂಪಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Comments