UK Suddi
The news is by your side.

ಆಂದೋಲ ಶ್ರೀಗಳ ಬಂಧನಕ್ಕೆ ಶ್ರೀರಾಮಸೇನಾ ಸದಸ್ಯರಿಂದ ಪ್ರತಿಭಟನೆ, ರಸ್ತೆ ತಡೆ

ಬಾಗಲಕೋಟೆ: ಮಹಾಲಿಂಗಪುರದ ಬಸವೇಶ್ವರ ವೃತ್ತದಲ್ಲಿ ಸ್ಥಳೀಯ ರಾಮಸೇನಾ ಸದಸ್ಯರು ಕಲಬುರ್ಗಿಜಿಲ್ಲೇಯ ಆಂದೋಲ ಶ್ರೀಗಳನ್ನು ಬಂಧನ ಮಾಡಿದನ್ನು ಖಂಡಿಸಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.  ಬಸವೇಶ್ವರ ವೃತ್ತದಲ್ಲಿ ಶ್ರೀರಾಮ ಸೇನಾ ಸಂಚಾಲಕ ಮಾಹಾಲಿಂಗಪ್ಪ ಗುಂಜಿಗಾಂವಿ ಮಾತನಾಡಿ ಸೋಮವಾರ ಕಲಬುರ್ಗಿ ಜಿಲ್ಲಾ ಆಂದೋಲದಲ್ಲಿ ಆಂದೋಲ ಶ್ರೀಗಳನ್ನು ರಾಜ್ಯ ಸರ್ಕಾರ ಬಂದಿಸಿರುವುದನ್ನು ಶ್ರೀ ರಾಮಸೇನೆ ಖಂಡಿಸುತ್ತದೆ, ಶ್ರೀಗಳದ್ದು ಯಾವುದೇ ಭಾಗದಲ್ಲೂ ಸಹ ತಪ್ಪಿಲ್ಲ, ಆದರೂ ಕೂಡ ಅವರನ್ನು ಬಂಧಿಸುವ ಕಾರ್ಯ ನಡೆದಿದೆ, ಶ್ರೀಗಳು ಯಾವೋದೋ ಒಂದು ಕೋಮಿಗೆ ಕೆಲಸ ಮಾಡಿದವರಲ್ಲ, ಸಾರ್ವಜನಿಕರ ಪರವಾಗಿ ಕೆಲಸ ಮಾಡಿದ ವಿಚಾರ ಅದಾಗಿದೆ, ರಸ್ತೆ ಅಗಲಿಕರಣದ ವಿಚಾರದಲ್ಲಿ ಅಂದೋಲನ ಶ್ರೀಗಳು ಪ್ರತಿಯೊಬ್ಬರಿಗೂ ನ್ಯಾಯ ಕೊಡಿಸುವ ಉದ್ದೇಶದಿಂದ ಹೋರಾಟ ಮಾಡಿದ ಸಂದರ್ಭ,   ರಸ್ತೆ ಬದಿಯಲ್ಲಿರುವ ಹಿಂದೂಗಳ ಅಂಗಡಿಗಳನ್ನು ಮಾತ್ರ ತೆರವುಗೋಳಿಸಿ, ಮುಸ್ಲಿಮರ ಅಂಗಡಿಗಳನ್ನು ಮಾತ್ರ ಅಲ್ಲಿ ಇಡಲು ಅವಕಾಶ ನೀಡದ್ದನ್ನು ವಿರೋಧಿಸಿ ಶ್ರೀಗಳು ಈ ಹೋರಾಟ ಆರಂಬಿಸಿದ್ದಾರೆ, ಅಲ್ಲಿರುವ ಎಂ.ಐ.ಎಂ. ಅಥವಾ ಪಿ.ಎಫ್.ಐ, ಎಸ್,ಡಿ.ಪಿಯವರಿರಬಹುದು ಇವರು ಮುಸ್ಲಿಮರ ಪರವಾಗಿ ನಿಂತು ಅವರ ಅಂಗಡಿಗಳು ಅಲ್ಲೇ ಇರುವಂತೆ ಮಾಡಿದರು. ಇದಕ್ಕೆ ಶ್ರೀಗಳುಗಳು ಹೋರಾಟವನ್ನು ಕೈಗೊಂಡಾಗ ಅಂದೋಲನ ಶ್ರೀಗಳನ್ನೆ ಬಂಧನ ಮಾಡಬೇಕೆಂದು ಎಂ.ಐ.ಎಂ. ಎಸ್.ಡಿ.ಪಿ, ಪಿ.ಎಪ್.ಐ ಯವರು ಒತ್ತಾಯಿಸಿದ್ದಾರೆ, ಇದರಲ್ಲಿ ರಾಜಕಾರಣಿಗಳ ಕೈವಾಡವು ಇದೆ, ಯಾವೋದೊ ಒಂದು ಕುಮ್ಮಕ್ಕಿಗಾಗಿ ಅವರನ್ನು ಬಂಧನ ಮಾಡಿದ್ದಾರೆ ಇದು ಸರಿಯಲ್ಲ,ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು, ಇದೇ ರೀತಿ ಮುಂದುವರೆದರೆ ಶ್ರೀರಾಮ ಸೇನೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನ ಶ್ರೀರಾಮ ಸೇನೆ ಸದಸ್ಯರು ಸೇರಿ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ವಾಹನ ಸಂಚಾರ ಸ್ಥಗೀತ ಗೋಳಿಸಿ, ರಾಜ್ಯ ಸರ್ಕಾರದ ವಿರುದ್ದ ಘೋಷನೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಇಲ್ಲಿ ಮಂಗಳವಾರ ಸಂತೆ ದಿನವಾದದ್ದರಿಂದ ಬಸ್,ವಾಹನ ಸಂಚಾರ ಸ್ಥಗೀತಗೊಂಡ ಹಿನ್ನೇಲೆಯಲ್ಲಿ ಪ್ರಯಾಣಿಕರು ಹಾಗೂ ಸಂತೆ ವ್ಯಾಪಾರಿಗಳು ಸ್ವಲ್ಪ ಸಮಯ ಪರದಾಡಬೇಕಾಯಿತು.

ಶ್ರೀರಾಮ ಸೇನೆ ತಾಲೂಕಾ ಮುಖಂಡ ಸತೀಶ ಜಗದಾಳ,ಶ್ರೀರಾಮ ಸೇನೆ ಸದಸ್ಯರಾದ ಸದಸ್ಯರಾದ ರವಿ ಜವಳಗಿ,ರಾಘು ಗರಗಟಗಿ, ಪ್ರವೀಣ ಕಟ್ಟಿ, ನಾಗರಾಜ ಭಜಂತ್ರಿ, ಬಸವರಾಜ ಗಿರಿಸಾಗರ, ಕುಮಾರ ನಾರಾಯಣ,ಮಂಜು ಸಿಂಪಿ,ಅಭಿಷೇಕ ತನಯಳ, ಕಿರಣ ದಲಾಲಕರ, ಈರಪ್ಪ ಹುಣಶ್ಯಾಳ, ವಿಷ್ಣುಗೌಡ ಪಾಟೀಲ, ಅನುಪ ಕಂಕನವಾಡಿ, ವಿನಾಯಕ ಗುಂಜಿಗಾಂವಿ, ಸತೀಶ ಜಗದಾಳ, ಮಹಾಂತೇಶ ಬಜಂತ್ರಿ, ಶ್ರೀಕಾಂತ ಮಾಂಗ, ಮಹಾಂತೇಶ ಮುಕುಂದ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments