UK Suddi
The news is by your side.

ಭಾರತೀಯ ಸೇನೆ ಸೇರಲಿವೆ ನಮ್ಮ ಮುಧೋಳ ನಾಯಿ


ಬಾಗಲಕೋಟೆ: ಬೇಟೆಗೆ ಹೆಸರಾದ ಕರ್ನಾಟಕದ ಮುಧೋಳದ ನಾಯಿಗಳು ಇದೀಗ ಭಾರತೀಯ ಸೇನೆ ಸೇರಲು ಸಿದ್ದವಾಗಿವೆ.


ಜರ್ಮನ್ ಶೆಫರ್ಡ್, ಲ್ಯಾಬ್ರಡೋರ್ಸ್ ಮತ್ತು ಗ್ರೇಟ್ ಸ್ವಿಸ್ಟೆ ಮೌಂಟೇನ್ ಸೇರಿದಂತೆ ವಿದೇಶಿ ತಳಿಗಳೇ ತುಂಬಿರುವ ಭಾರತೀಯ ಸೈನ್ಯಕ್ಕೀಗ ಇದೇ ಮೊದಲ ಬಾರಿ ದೇಶಿಯ ಶ್ವಾನ ತಳಿ ಸೇರ್ಪಡೆಯಾಗುತ್ತಿರುವುದು ವಿಶೇಷ. ಅದರಲ್ಲಿಯೂ ಕರ್ನಾಟಕದ ಜನರ ಪಾಲಿಗೆ ಇದೊಂದು ಹೆಮ್ಮೆಯ ವಿಷಯ. 6 ಮುಧೋಳ ನಾಯಿಗಳಿಗೆ ವಿಶೇಷ ತರಬೇತಿ ನೀಡಲಾಗಿದ್ದು ಈ ವರ್ಷದ ಅಂತ್ಯದ ವೇಳೆಗೆ ಸೇನೆಗೆ ಸೇರಲಿವೆ.  ಭಯೋತ್ಪಾದಕರ ಉಪಟಳ ಹೆಚ್ಚಾಗಿರುವ ಜಮ್ಮು ಕಾಶ್ಮೀರದಲ್ಲಿ ನಡೆಯುವ ಸೇನಾ ಕಾರ್ಯಾಚರಣೆಯಲ್ಲಿ ಇವು ಭಾಗವಹಿಸಲಿವೆ.

ಸಾವಿರಾರು ವರ್ಷಗಳ ಹಿಂದೆಯೇ ಅರೇಬಿಯಾ, ಮಧ್ಯ ಏಷ್ಯಾದಿಂದ ಈ ನಾಯಿ ಭಾರತಕ್ಕೆ ಬಂದಿತ್ತು. ಹಲಗಲಿಯ ಬೇಡರು ಬೇಟೆಗಾಗಿ ಈ ನಾಯಿಗಳನ್ನು ಬಳಸುತ್ತಿದ್ದರು. ಇಂದಿಗೂ ಮಧೋಳದ ಸುಮಾರು 750 ಕುಟುಂಬಗಳು ಈ ನಾಯಿಯನ್ನು ಸಾಕಿ ಮಾರಾಟ ಮಾಡುತ್ತಿವೆ
.

Comments