UK Suddi
The news is by your side.

ಹೆ(ಹು)ಣ್ಣು

ಹೆ(ಹು)ಣ್ಣು
ಅಮ್ಮನ ಹೆರಿಗೆಯ ಸುದಿನ

ಅಪ್ಪ ಕರುಳ ಕುಡಿ ನಿರೀಕ್ಷೀಸುತ

ಕಲ್ಪನಾಲೋಕದಿ ತೆಲಾಡುತ್ತಿದ್ದ|
ಅಜ್ಜಿ ಕಂದನ ಅಡಿಸುವ, ಬೆಳೆಸುವ

ಕನಸಿನಲಿ ಜೋಗುಳ ಮೆಲಕಿಸುತ

ನಲಿದಾಡುತಿದ್ದಳು ಹರ್ಷಿಸುತ|
ಬಳಗದವರೆಲ್ಲ ಕಂದನ ಸ್ವಾಗತಕೆ

ಸಂಭ್ರಮದಿ ಮನೆಯ ಸಿಂಗರಿಸಿ

ನಿರೀಕ್ಷೇಯ ಸಾಗರದಿ ಮುಳಿಗಿದ್ದರು|
ಕಂದನ ಆಕ್ರಂದನ ಹೊರಹೊಮ್ಮಿತು

ಬಳಗದ ಸಂತೋಷಾನಂದ ಉಕ್ಕೇರಿತು

ಅಜ್ಜಿ ಬಂದು ಹೆಣ್ಣೆಂದು ತಿಳಿಸಿದಳು|
ಜರ್ರನೆ ಜರಿಯಿತು ಆನಂದ

ಆನಂದಕ್ಕೆ ಪಾರವಿಲ್ಲದ ಬಳಗಕೆ

ಆನಂದದ ಪರಿವೇ ಇಲ್ಲದಾಯಿತು|
ಕಂದ ಬರುವ ಮೋದಲಿನ ಸಂತಸ

ತದನಂತರ ತಲೆ ಎತ್ತಲೇ ಇಲ್ಲ;

ಪ್ರೀತಿ-ಪೇಮ ತೋರೆದ ಪ್ರೇತರಾದರೆಲ್ಲ|
ಅಕ್ಕರೆ, ಅನುರಾಗ, ಮಮತೆ, ಮುದ್ದು

ಸುಳಿವೇ ಸಿಗದಂತೆ ಪಲಾಯನವಾದವು

ಹೆಣ್ಣು ಮಗಳ ಮೊಗ ನೋಡಿದಾಕ್ಷಣ| 

.

.

 – ಮಹಾಂತೇಶ ಹೊಂಗಲ

Ph: 9980677115

Comments