UK Suddi
The news is by your side.

ಗಾಢ ನಿದ್ದೆಯಲ್ಲಿರುವ ಸಿದ್ಧಣ್ಣನವರನ್ನು ಎಬ್ಬಿಸಲು ನಾವೆಲ್ಲಾ ಜೋರಾಗಿ “ಭಾರತ್ ಮಾತಾ ಕೀ ಜೈ” ಎಂದು ಬೂತ್ ಮಟ್ಟದವರೆಗೆ ಜೋರಾಗಿ ಕೂಗಬೇಕಿದೆ:ಅನಂತಕುಮಾರ್ ಹೆಗಡೆ

ಬೆಂಗಳೂರು:ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲ ರಾಜ್ಯ ಸಚಿವರಾದ ಅನಂತಕುಮಾರ ಹೆಗಡೆಯವರು ನಿನ್ನೆ ಬೆಂಗಳೂರಿನಲ್ಲಿ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿ ಯಾತ್ರೆಗೆ ಶುಭ ಕೋರಿದರು.  

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು ರಾಜ್ಯದ ಮುಖ್ಯಮಂತ್ರಿಗೆ ಇತಿಹಾಸ, ಪರಂಪರೆಯ ಬಗ್ಗೆ ಅರಿವೇ ಇಲ್ಲ.ಸಂಸ್ಕೃತಿ ಮತ್ತು ಸಭ್ಯತೆ ಇಲ್ಲದವರು ರಾಜಕಾರಣ ಮಾಡಲು ನಾಲಾಯಕ್ ಹಾಗು ಇಂಥವರ ಸಾಲಿಗೆ ಸಿದ್ಧಣ್ಣ ಸೇರುತ್ತಾರೆ ಎಂದರು.  

ಗಾಢ ನಿದ್ದೆಯಲ್ಲಿರುವ ಸಿದ್ಧಣ್ಣನವರನ್ನು ಎಬ್ಬಿಸಲು ನಾವೆಲ್ಲಾ ಜೋರಾಗಿ “ಭಾರತ್ ಮಾತಾ ಕೀ ಜೈ” ಎಂದು ಬೂತ್ ಮಟ್ಟದವರೆಗೆ ಜೋರಾಗಿ ಕೂಗಬೇಕಿದೆ ಎಂದು ಹೇಳಿದರು.  ಜನರ ಅದರಲ್ಲೂ ಗ್ರಾಮೀಣ ಭಾಗದ ಜನರ ಕಷ್ಟದ ಅರಿವೆಯಿಲ್ಲದ ಮುಖ್ಯಮಂತ್ರಿಗಳಿಗೆ ಖಡಕ್ ಉತ್ತರ ನೀಡಬೇಕಾಗಿದೆ ಎಂದರು.  

ಪರಿವರ್ತನಾ ಯಾತ್ರೆ ಸಂಪೂರ್ಣ ಯಶಸ್ವಿಯಾಗಿ ಸನ್ಮಾನ್ಯ ಯಡಿಯೂರಪ್ಪನವರನ್ನು ನಮ್ಮ ಮುಂದಿನ ಮುಖ್ಯಮಂತ್ರಿಗಳನ್ನಾಗಿ ಮಾಡಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರೋಣವೆಂದರು. ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷರಾದ ಅಮಿತ್ ಷಾ ರವರು ಯಾತ್ರೆಗೆ ಶುಭ ಕೋರಿ ಹಸಿರು ನಿಶಾನೆ ತೋರಿದರು. 

Comments