UK Suddi
The news is by your side.

ದೇವಾ ನೀ ಉಳಿಸಿರುವುದಾದರೂ ಏನು?

ಉರಿಯುವ ದೀಪಕೆ

ಎಣ್ಣೆ ಸಿಗದಂತೆ ಮಾಡುವೆ ನೀ ….

ಹಾರುವ ಹಕ್ಕಿಗೆ ರೆಕ್ಕೆ ಮುರಿದು ನೋಡುವೆ ನೀ….

ಸೂರ್ಯನಿಗೂ ಚಂದ್ರನಿಗೂ ಗ್ರಹಣ ಹಿಡಿಯುವಂತೆ ಆಟವಾಡುವೆ ನೀ…..

ಹಸಿರಾದಭೂಮಿಯನು ಬರುಡುಮಾಡಿ 

ಹಣ್ಣುಬಿಡುವ ಮರವನು ಗೊಡ್ಡು ಮರವನ್ನಾಗಿಸಿ….

ಬೆಳೆದ ಬೆಳೆಯನು ಮಣ್ಣುಪಾಲಾಗಿಸಿ 

ನಿನ್ನ ಮನಬಂದಕಡೆ ಗಾಳಿ 

ಕಾಲಿಡುವಕಡೆ ಬೇಲಿ 

ಕಲ್ಲು ಮುಳ್ಳಿನ ದಾರಿಯ ಹಾವಳಿಯ  ಕೊಟ್ಟು ….

ಬೆನ್ನಮೇಲೆ ಒಂದರ ಮೇಲೊಂದರಂತೆ ಚಪ್ಪಡಿಯ ಕಲ್ಲನ್ನು ಇಟ್ಟು …..

ಇನ್ನೇನು ಮಾಡಲು ಬಯಸಿರುವೆಯೋ ದೇವಾ …… ಮಾಡುವದನೆಲ್ಲವ  ನೀ ಪೂರ್ತಿಮಾಡು ಏನೇ ಮಾಡು ತುಸು ಬೇಗ ಮಾಡು….. ನೀರಲ್ಲಿಮುಳುಗಿದ ಜೀವಕೆ ಭಯವೇನು? ಕೊಡುವ ಕಷ್ಟಗಳ ಕ್ರೂರತೆಯನ್ನಾದರೂ ಪೂರ್ತಿಯಾಗಿ ಕೊಟ್ಟುಬಿಡು….

ಇನ್ನು ಅದರ ಅರ್ಥವ ತಿಳಿಸಲು ನೀ ಉಳಿಸಿರುವುದಾದರೂ ಏನು?!

.

.

❤ಪ್ರೀತಿ ಇಂದ ಪ್ರೀತಿಯ ❤

❤ಹಂಚ ಬೇಕು ಮಾನವ ❤

   ನಿಮ್ಮ ಅನಿಸಿಕೆಯನ್ನು ??

ಈ ವಾಟ್ಸ್ ಆಪ್ number ಗೆ ಕಳಿಸಿ 

೯೯೪೫೬೪೫೯೮೫ (9945645985)

     ??ಧನ್ಯವಾದಗಳೊಂದಿಗೆ ??

             ? ವಾಣಿ ಶೆಟ್ಟಿ ?

Comments