UK Suddi
The news is by your side.

ಮಾನವೀಯತೆ ಮೆರೆದ ಬಾಗಲಕೋಟೆ ನಗರದ ಶ್ರೀ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ವೈದ್ಯರು

ಬಾಗಲಕೋಟ:ಖಾಸಗಿ ಆಸ್ಪತ್ರೆ ಬಂದ್ ಹಿನ್ನೆಲೆ ಪ್ರಸೂತಿಗಾಗಿ ಆಸ್ಪತ್ರೆ-ಆಸ್ಪತ್ರೆ ಅಲೆದಾಡಿದ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ ಮಹಿಳೆ…..ಕೊನೆಗೆ ಕುಮಾರೇಶ್ವರ ಆಸ್ಪತ್ರೆಯ ವೈದ್ಯರು ಸಿಬ್ಬಂದಿ ಯಶಸ್ವಿಯಾಗಿ ಪ್ರಸೂತಿ ಮಾಡಿಸಿದ್ದಾರೆ.ಗಂಡು ಮಗುವಿಗೆ ಜನ್ಮ ನೀಡಿರುವ ತಾಯಿ ತನ್ನ ಮಗುವಿಗೆ ಹೆರಿಗೆ ಮಾಡಿಸಿದ ವೈದ್ಯ ಡಾ.ಮನೋಹರ್ ಟಂಕಸಾಲಿ ಅವರ ಹೆಸರು ಇಡಲು ನಿರ್ಧರಿಸಿದ್ದಾರೆ.
ಸುದ್ದಿಯ ಜೊತೆಗೆ ಗರ್ಭಿಣಿಯ ಜೀವ ಉಳಿಸಲು ಪ್ರಮುಖ ಪಾತ್ರ ವಹಿಸಿದ ನಗರದ ಹಿರಿಯ ಪತ್ರಕರ್ತ ರಾಮಮನಗೂಳಿಯವರು, ಕುಮಾರೇಶ್ವರ ಆಸ್ಪತ್ರೆಗೆ ಫೋನ್ ಮಾಡಿ ವೈದ್ಯರಲ್ಲಿ ಮನವಿ ಮಾಡಿಕೊಂಡು ಮಹಿಳೆಯ ಜೀವ ಉಳಿಸಲು ಪ್ರಯತ್ನಿಸುದ್ದು ನಿಜವಾಗ್ಲೂ ಶ್ಲಾಘನೀಯ.ಇನ್ನೊಬ್ಬ ಹಿರಿಯ ಪತ್ರಕರ್ತ ಅಶೋಕ ಶೆಟ್ಟರ್ ಅವರು ಕೂಡ ಇದಕ್ಕೆ ಶ್ರಮಿಸಿದ್ದಾರೆ.ಸಮಯ ಪ್ರಜ್ಞೆ ಮೆರೆದ 108 ವಾಹನದ ಸಿಬ್ಬಂದಿಗೂ ಕೂಡಾ ಧನ್ಯವಾದ ತಿಳಿಸಿದ್ದಾರೆ.

Comments