UK Suddi
The news is by your side.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನರೇಂದ್ರಮೋದಿ ಸರ್ಕಾರದ ಜೊತೆಗೂಡಿ ವೇಗದಲ್ಲಿ ಕರ್ನಾಟಕದ ಅಭಿವೃದ್ಧಿ:ಬಿ ಎಸ್ ಯಡಿಯೂರಪ್ಪ

ಪರಿವರ್ತನಾ ಯಾತ್ರೆಯ 2ನೇ ದಿವಸವಾದ ಇಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಮುಂಜಾನೆ ಯಡಿಯೂರು ಸಿದ್ದಲಿಂಗೇಶ್ವರನ ದರ್ಶನಾಶೀರ್ವಾದಗಳನ್ನು ಪಡೆಯುವುದರ ಮೂಲಕ ಪರಿವರ್ತನಾ ಯಾತ್ರೆಯನ್ನು ಆರಂಭಿಸಿದರು. 

ನಂತರ ತುರುವೇಕೆರೆಯಲ್ಲಿ ರೋಡ್ ಶೋ ನಡೆಸಿದರು. ಅಲ್ಲಿನ ಮಹಾಜನತೆಯನ್ನುದ್ದೇಶಿಸಿ ಸಾರ್ವಜನಿಕ ಭಾಷಣ ಮಾಡಿದ ಯಡಿಯೂರಪ್ಪನವರು ಸಿದ್ದರಾಮಯ್ಯನವರ ಸರ್ಕಾರದ ಭ್ರಷ್ಟಾಚಾರಗಳು, ಹಗರಣಗಳು ಮತ್ತು ವೈಫಲ್ಯಗಳ ಸರಮಾಲೆಗಳನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನರೇಂದ್ರಮೋದಿ ಸರ್ಕಾರದ ಜೊತೆಗೂಡಿ ವೇಗದ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು. ಮುಖಂಡರುಗಳಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಶ್ರೀರಾಮುಲು ಮುಂತಾದವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Comments