UK Suddi
The news is by your side.

ಬಿಜೆಪಿಯ ಜನಪ್ರಿಯ ಯೋಜನೆ ಜನರಿಗೆ ತಲುಪದಂತೆ ಸಿದ್ದರಾಮಯ್ಯನವರು ಮಾಡಿದ್ದಾರೆ:ಬಿ ಎಸ್ ವೈ

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರು ಭರ್ಜರಿ ಜನಬೆಂಬಲದೊಂದಿಗೆ 2ನೇ ದಿನದ ಪರಿವರ್ತನಾ ಯಾತ್ರೆಯ ಅಂತಿಮ ಹಂತವನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಸಿದರು. 
ದಣಿವರಿಯದಂತೆ ಸರಣಿ ಸಭೆಗಳನ್ನು ನಡೆಸುತ್ತಿರುವ ಯಡಿಯೂರಪ್ಪನವರು ಹೆಬ್ಬೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿಯ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮಿ, ಭಾಗ್ಯರಥ ಮುಂತಾದವುಗಳನ್ನು ಜನರಿಗೆ ತಲುಪದಂತೆ ಸಿದ್ದರಾಮಯ್ಯನವರು ಮಾಡಿದ್ದಾರೆ. ಅವರು ಜನಾಶೀರ್ವಾದ ಯಾತ್ರೆಗೆ ಹೊರಡುವ ಮುನ್ನ ಎಷ್ಟು ಜನ ಕಾಂಗ್ರೆಸ್ ನಾಯಕರು ಅವರ ಜೊತೆಗಿರುತ್ತಾರೆ ನೋಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು. 
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಶೋಭಾ ಕರಂದ್ಲಾಜೆ, ಶ್ರೀರಾಮುಲು ಮುಂತಾದ ಗಣ್ಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

Comments