UK Suddi
The news is by your side.

ನಿನಗಾಗಿ ಉಳಿದಿರುವ ಮಾತುಗಳು

ಬಚ್ಚಿಡಲಾಗದು ಮನದ ಮಾತುಗಳ 

ಮೌನದಲಿ ಸುಡುತಿರುವೆ ನಿ ನನ್ನ ಹೃದಯ 

ಆಡದ ಮಾತುಗಳು ಸರಿಗಮವ ಹಾಡುತಿವೆ 

ಆಡಿದ ಮಾತುಗಳು ನೆನಪಾಗಿ 

ಕಾಡುತ್ತಿವೆ 

ಬಂದೆ ಬೆಳಕಾಗಿ ಕಡು ಕತ್ತಲೆಯ ಮನಕೆ 

ನಿಂತುಬಿಟ್ಟೆ ವಜ್ರದ ಹರಳಿನಂತೆ 

ನಿನ್ನಲೊಂದು ಮನವಿ 

ಕೊಟ್ಟು ಬಿಡು ನಿನ್ನಲ್ಲಿರುವ ನನ್ನ ಹೃದಯವ 

ಬಿಟ್ಟುಬಿಡು ಈ ಮೌನದ ಬಯಕೆಯ

ನಿನಗೆಂದು ಹೇಳಲು ನೂರಾರು ಸಾಲುಗಳು ಕಾದುಕುಳಿತಿದೆ ನೋಡು 

ಮೌನದ ತೆರೆ ಸರಿಸಿ ನನ್ನ ಸನಿಹಕೆ ಬಂದೊಮ್ಮೆ ನನ್ನ ಮಾತಲ್ಲಿ ಕೇಳು 

ನಿನಗಾಗಿ ಉಳಿದಿರುವ ಮಾತುಗಳ

ನಿನಗಲ್ಲದೆ ಬೇರೆ ಯಾರಿಗೂ ಹೇಳದು ಈ ಹೃದಯ

.

.

(ಬರವಣಿಗೆ )

ಇವಾ ಲೇಖಾ

ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ ??

ivaalekha7717@gmail.com

ವಾಟ್ಸ್ ಆಪ್ No: 9741329365

Comments