UK Suddi
The news is by your side.

ಹಂಪಿ ಉತ್ಸವ ಉದ್ಘಾಟಿಸಿ ವಿರೂಪಾಕ್ಷೇಶ್ವರನ ದರ್ಶನ ಪಡೆಯದೇ ಹಿಂದಿರುಗಿದ ಸಿ.ಎಂ.

ಹೊಸಪೇಟೆ: ಶುಕ್ರವಾರ ರಾತ್ರಿ ‘ಹಂಪಿ ಉತ್ಸವ’ ಉದ್ಘಾಟಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಕ್ರಮ ಸ್ಥಳದಿಂದ ಅನತಿ ದೂರದಲ್ಲಿಯೇ ಇದ್ದ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿಲ್ಲ.

ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಪ್ರತೀತಿ ಇದ್ದು, ಆ ಕಾರಣಕ್ಕಾಗಿಯೇ ಸಿ.ಎಂ. ಅಲ್ಲಿಗೆ ಹೋಗಲಿಲ್ಲ ಎನ್ನಲಾಗಿದೆ. ಈ ಹಿಂದೆ ದೇವಸ್ಥಾನಕ್ಕೆ ಭೇಟಿ ನೀಡಿದ ಇಂದಿರಾ ಗಾಂಧಿ, ಎಸ್‌. ಬಂಗಾರಪ್ಪ, ಬಿ.ಎಸ್‌. ಯಡಿಯೂರಪ್ಪ ಕೂಡ ದೇವಸ್ಥಾನ ಭೇಟಿಯ ನಂತರ ಅಧಿಕಾರ ಕಳೆದುಕೊಂಡಿದ್ದರು ಎಂಬ ನಂಬಿಕೆ ಸ್ಥಳೀಯರಲ್ಲಿ ಇದೆ.

Comments