UK Suddi
The news is by your side.

ಜಮಖಂಡಿ ಸಕ್ಕರೆ ಕಾರ್ಖಾನೆ ಕಬ್ಬು ಪೂರೈಕೆದಾರರ, ಷೇರುದಾರರ ರೈತರ ಸಭೆ


ಬಾಗಲಕೋಟ: ಇಂದು ಜಮಖಂಡಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಜರುಗಿದ ಜಮಖಂಡಿ ಸಕ್ಕರೆ ಕಾರ್ಖಾನೆಯ ಕಬ್ಬು ಪೂರೈಕೆದಾರರ, ಷೇರುದಾರರ ರೈತರ ಸಭೆ ನಡೆಯಿತು,ಈ ಸಭೆಯಲ್ಲಿ ಚರ್ಚಿಸಿ ಅನೇಕ ತೀರ್ಮಾನಗಳನ್ನು ಎಲ್ಲರ ಸಮ್ಮುಖದಲ್ಲಿ ತೆಗೆದುಕೊಳ್ಳಲಾಯಿತು.
ತೆಗೆದುಕೊಂಡ ನಿರ್ಣಯಗಳು ಈ ರೀತಿ ಇವೆ:
• ಕಳೆದ 2016-17ನೇ ಸಾಲಿನಲ್ಲಿ ನಮ್ಮ ಕಾರ್ಖಾನೆಗೆ ಪೂರೈಸಿದ ಕಬ್ಬಿಗೆ ಎರಡನೆಯ ಬಿಲ್ ಘೋಷಣೆ ಮಾಡಲಾಗಿದ್ದು. ಎರಡನೆಯ ಬಿಲ್ ರೂ.310/- (ರೂಪಾಯಿ ಮೂರನೂರ ಹತ್ತು ಮಾತ್ರ) ಪ್ರತಿ ಮೆಟ್ರಿಕ್ ಟನ್‍ಗೆ ಎಂದು ನಿಗಧಿಯಾಗಿದೆ.

• ಜಮಖಂಡಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಸಮಸ್ತ ರೈತಬಾಂಧವರು, ಷೇರುದಾರರು ಒಕ್ಕೋರಲಿನಿಂದ 2016-17ನೇ ಸಾಲಿನ ಎರಡನೆ ಬಿಲ್‍ನ್ನು ಸ್ವಾಗತಿಸಿದ್ದು ಕಾರ್ಖಾನೆಯು ಪ್ರಸಕ್ತ ಸಾಲಿನ 2017-18ರ ಕಬ್ಬು ನುರಿಸುವ ಹಂಗಾಮನ್ನು ಪ್ರಾರಂಭಿಸಲು ಸಮ್ಮತಿ ಸೂಚಿಸಿದರು.

• ಜಮಖಂಡಿ ಸಕ್ಕರೆ ಕಾರ್ಖಾನೆಯು ಸಮಸ್ತ ಕಬ್ಬು ಪೂರೈಕೆದಾರರು, ಷೇರುದಾರರು, ರೈತಬಾಂಧವರ ಸಂಪೂರ್ಣ ಸಮ್ಮತಿಯೊಂದಿಗೆ 2017-18ರ ಕಬ್ಬು ನುರಿಸಲು ಪ್ರಾರಂಭ ಮಾಡುತ್ತಿದ್ದು ಕಬ್ಬಿನ ಬಿಲ್‍ಗೆ ಸಂಬಂಧಿಸಿದಂತೆ ರೈತ ಸಂಘಟನೆ ಅಥವಾ ಇತರೆ ಸಂಘಟನೆಗಳಾಗಲಿ ಮುಷ್ಕರ / ಧರಣಿ / ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬಾರದೆಂದು ಸದರಿ ಸಭೆ ತೀರ್ಮಾಣಕೈಗೊಂಡಿತು.

ಈ ಸಂದರ್ಭದಲ್ಲಿ ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಆನಂದ್ ಎಸ್ ನ್ಯಾಮಗೌಡ,ಅಧ್ಯಕ್ಷರು,ನಿರ್ದೇಶಕರು,ಆಡಳಿತ ಮಂಡಳಿ ಸದಸ್ಯರು,ರೈತರು ಉಪಸ್ಥಿತರಿದ್ದರು.

Comments