UK Suddi
The news is by your side.

ರಾಜ್ಯಾದ್ಯಂತ ವಿಕಾಸ ಯಾತ್ರೆ ಪ್ರವಾಸ ನಡೆಸಲು  ಜೆಡಿಎಸ್ ಸಜ್ಜು

ರಾಜ್ಯಾದ್ಯಂತ ವಿಕಾಸ ಯಾತ್ರೆ ಪ್ರವಾಸ ನಡೆಸಲು ಸಜ್ಜಾಗಿರೋ ಜೆಡಿಎಸ್  ಇಂದು ಮೈಸೂರಿನಲ್ಲಿ ಕುಮಾರಪರ್ವ ಸಮಾವೇಶ ನಡೆಸುತ್ತಿದೆ. ಕಾರ್ಯಕ್ರಮಕ್ಕೆ ಮುನ್ನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು. 

ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ರು. ಇನ್ನು ಕುಮಾರಸ್ವಾಮಿ ಪ್ರವಾಸಕ್ಕೆಂದು ರೆಡಿಯಾಗಿರೋ ವಿಕಾಸವಾಹಿನಿ ವಾಹನಕ್ಕೂ ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿಲಾಗುತ್ತೆ. ಬಳಿಕ ಜೆಡಿಎಸ್ ವಿಕಾಸಯಾತ್ರೆ ಶುರುವಾಗಲಿದೆ.

Comments