UK Suddi
The news is by your side.

‘ಅವಳ ಹೊರತು ಬೇರಾರು ನೆನಪಾಗರು ನನಗೆ’ 

ಕೋಪವು ಬರುತಿದೆ ನನಗೆ

ನೆನಪಿಲ್ಲವೇನು ನಿಮಗೆ..?

ಬೇಡನಮಗೆ ಈ ಪ್ರಪಂಚದ

ತಗಾದೆಗಳು …ಕೆಲಸಕಾರ್ಯಗಳ ನಡುವೆ ನನ್ನ ಮರೆತರೆ ಹೇಗೆ?

ಬಚ್ಚಿಟ್ಟುಕೊಳ್ಳಿ ನನ್ನ ನಿಮ್ಮ ಹೃದಯದಲಿ

ಬೆಚ್ಚಗಿರುವೆ ನಿಮ್ಮ ಅರಮನೆಯಲ್ಲಿ

ಸಿಂಗರಿಸಿಕೊಳ್ಳಿ ನಿಮ್ಮ ಪ್ರೇಮದಲ್ಲಿ

ಕಂಗೊಳಿಸುವೆ ನಕ್ಷತ್ರದಂತೆ ನಿಮ್ಮ ಕಂಗಳಲ್ಲಿ….

ನಿ ಕಾಣದ ಕ್ಷಣಗಳಲ್ಲಿ  ನಾ ನಿಮ್ಮ ಕೇಳಿದೆ ನೆನಪಾಗಲಿಲ್ಲವೇ ನಾ ನಿಮಗೆ ಎಂದು ….

ನೀವು ಹೇಳಿದಿರಿ ಖಂಡಿತ ಇಲ್ಲವೆಂದು …!

ನೋವಾಯಿತು ಹೃದಯ ಕಣ್ರೆಪ್ಪೆ ಒದ್ದೆಯಾಗುವುದರಲ್ಲಿ  ಮರು ಮಾತೊಂದು ಬಂತು ನಿಮ್ಮಿಂದ ‘ಅವಳ ಹೊರತು ಬೇರಾರು ನೆನಪಾಗರು ನನಗೆ’  …ಹೇಳಲಾ ಅವಳು ಯಾರೆಂದು ನಿನಗೆ? ನಾ ಕೇಳಿದೆ ನೋವಲ್ಲಿ  ಮುಖ ಮಾಡಿ ….

‘ಸದಾ ನೆನಪಾಗುವವಳು ನನ್ನ ಮಗುವಿನ ತಾಯಿ ‘ ಎಂದು ….

ಮೊಗವೆಲ್ಲ ತಿಳಿಯದೆ ರಂಗೇರಿತು ನನಗೆ….

ನನ್ನವನ ಮಾತಿನ ಮೋಡಿಗೆ ….

ಒಂದಾಯಿತು ಕಂಗಳು ಆನಂದದಲಿ ಕರಗಿತು ಕಣ್ಣಲಿದ್ದ ನನ್ನ ಕಾಡಿಗೆ!!

.

.

(ಬರವಣಿಗೆ )

ಇವಾ ಲೇಖಾ

ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ ??

ivaalekha7717@gmail.com

ವಾಟ್ಸ್ ಆಪ್ No: 9741329365

Comments