UK Suddi
The news is by your side.

ಉಗ್ರವಾದವನ್ನು ಹತ್ತಿಕ್ಕಲು ಅಸಮರ್ಥವಾಗಿರುವ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬಿ ಎಸ್ ವೈ.

ಉಡುಪಿ:ಉಡುಪಿ ಜಿಲ್ಲೆಯ ಸಭೆಗಳನ್ನು ಯಶಸ್ವಿಯಾಗಿ ನಡೆಸಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು 10ನೆಯ ದಿನದ ಅಂತಿಮ ಸಭೆಯನ್ನು ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಸಿದರು. ಕರ್ನಾಟಕದಲ್ಲಿ ಉಗ್ರವಾದ ಭಟ್ಕಳದಿಂದಲೇ ಶುರುವಾಗಿದ್ದು, ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆಗಳಾಗುತ್ತಿವೆ. ನಿನ್ನೆಯಷ್ಟೇ ಕೇರಳದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತನೊಬ್ಬನ ಹತ್ಯೆ ಮಾಡಲಾಗಿದೆ ಎಂದ ಅವರು ಉಗ್ರವಾದವನ್ನು ಹತ್ತಿಕ್ಕಲು ಅಸಮರ್ಥವಾಗಿರುವ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 10ದಿನಗಳಲ್ಲಿ 30ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸಭೆಗಳನ್ನು ನಡೆಸಿದ್ದು ಉತ್ತಮ ಬೆಂಬಲ ದೊರಕುತ್ತಿದೆ. ನಾಳೆ ವಿಶ್ರಾಂತಿಯ ನಂತರ ಉತ್ತರ ಕನ್ನಡದಲ್ಲಿ ಪರಿವರ್ತನೆಯ ಗಾಳಿ ಬೀಸಲಿದೆ ಎಂದರು.

Comments