UK Suddi
The news is by your side.

ಮಹಾ ಚಳಿಗೆ ಉತ್ತರ ಕರ್ನಾಟಕ ಗಡ ಗಡ!

ಬೆಂಗಳೂರು: ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ದಿನೇ ದಿನೆ ತಾಪಮಾನ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಚಳಿಗೆ ತತ್ತರಿಸಿದ್ದಾರೆ.

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ವಾಡಿಕೆಗಿಂತ 6-8 ಡಿಗ್ರಿ ಸೆ.ಯಷ್ಟು ಕಡಿಮೆಯಾಗಿದೆ.

ಬಾಗಲಕೋಟೆಯಲ್ಲಿ ನ.12ರ ರಾತ್ರಿ ಕನಿಷ್ಠ ತಾಪಮಾನ 10.8 ಡಿಗ್ರಿ ಸೆ.ಗೆ ಇಳಿದಿದ್ದರೆ, ಬೀದರ್​ನಲ್ಲಿ 10 ಡಿಗ್ರಿ ಸೆ., ವಿಜಯಪುರದಲ್ಲಿ 12.5, ಬೆಳಗಾವಿಯಲ್ಲಿ 11.8, ಹಾವೇರಿಯಲ್ಲಿ 13 ಡಿಗ್ರಿ ಸೆ. ದಾಖಲಾಗಿದೆ.

Comments