UK Suddi
The news is by your side.

ಯುಕೆಎಚ್ಎಸ್ ಕಾಯ೯ಕಾರಿಣಿ ಸಭೆ. ಪತ್ರಿಕೆ ಮತ್ತು ಪಕ್ಷ ಸ್ಥಾಪನೆಗೆ ಗಂಭೀರ ಚಿಂತನೆ.

ಉತ್ತರ ಕನಾ೯ಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಪಕ್ಷ ಮತ್ತು ಪತ್ರಿಕೆ ಎರಡು ಕಣ್ಣುಗಳಿದ್ದಂತೆ ಎಂದು ಸಮಿತಿಯ ಗೌರವ ಸಲಹೆಗಾರ ಪ್ರೊ. ಶಿವರಾಜ ಪಾಟೀಲ ಅಭಿಮತ ವ್ಯಕ್ತಪಡಿಸಿದರು. ಸಮಿತಿಯ ವಿಚಾರಗಳನ್ನು ಪ್ರಚಾರ ಮಾಡಲು ಪತ್ರಿಕೆ ಅವಶ್ಯವಾಗಿದೆ ಎಂದರು. ರಾಷ್ಟ್ರೀಯ ಪಕ್ಷಗಳಿಗೆ ಉತ್ತರ ಕನಾ೯ಟಕದ ಕುರಿತು ಕಾಳಜಿ ಇಲ್ಲದಂತಾಗಾದೆ ನಮ್ಮ ಭಾಗದ ಯಾವ ಸಮಸ್ಯೆಗಳಿಗೂ ಸ್ಪಂದನೆ ಇಲ್ಲವಾಗಿದೆ. ಪ್ರಾದೇಶಿಕ ಸಮಸ್ಯೆಗಳ ನಿವಾರಣೆಗೆ ಪ್ರಾದೇಶಿಕ  ಪಕ್ಷ ಅವಶ್ಯ ಮತ್ತು ಅನಿವಾಯ೯ ಎಂದರು. ಈ ಹಿಂದೆ ಅನೇಕ ಪಕ್ಷಗಳು ಸ್ಥಾಪನೆಯಾಗಿ ತದನಂತರ ನಾಮಾವಶೇಷವಾಗಿವೆ. ವ್ಯಕ್ತಿಗತವಾಗಿ, ಸ್ವ ಪ್ರತಿಷ್ಠೆಗಾಗಿ,ಸೇಡಿನ ಮನೋಭಾವದಿಂದ ಹುಟ್ಟಿಕೊಂಡ ಪಕ್ಷಗಳಿಗೆ ಆಯುಷ್ಯ ಕಡಿಮೆ. ಉತ್ತರ ಕನಾ೯ಟಕ ಪ್ರತ್ಯೇಕ ರಾಜ್ಯ ರಚನೆಯೇ ಘಣ ಉದ್ದೇಶವಾಗಿಟ್ಟುಕೊಂಡು ಜನರಿಂದ,ಜನರಿಗಾಗಿ,ಜನರಿಗೋಸ್ಕರ ಪ್ರಾದೇಶಿಕ ಪಕ್ಷ ಕಟ್ಟೋಣ ಎಂದರು. ಕೃಷಿ,ನೀರಾವರಿ,ಶಿಕ್ಷಣ,ಸಾಹಿತ್ಯ,ಸಂಸ್ಕೃತಿ,ಸಾರಿಗೆ,ರಸ್ತೆ,ರೈಲು,ಉದ್ಯಮ,ಪತ್ರಿಕೋದ್ಯಮ,ಪ್ರವಾಸೋದ್ಯಮ ಹೀಗೆ ಅನೇಕ ಕ್ಷೇತ್ರಗಳಲ್ಲಿ ಉತ್ತರ ಕನಾ೯ಟಕ ಹಿಂದುಳಿದಿದೆ. ಏಕೀಕರಣವಾಗಿ 61ವಷ೯ಗಳು ಕಳೆದರೂ ಉತ್ತರ ಕನಾ೯ಟಕ ಸಮಗ್ರ ಅಭಿವೃಧ್ಧಿಯಾಗಲಿಲ್ಲ. ಅದಕ್ಕೆ ಪ್ರತ್ಯೇಕ ರಾಜ್ಯವೇ ಪರಿಹಾರವಾಗಿದೆ. ಇಲ್ಲಿಯವರೆಗಿನ ಎಲ್ಲಾ ಸರಕಾರಗಳೂ ಉತ್ತರ ಕನಾ೯ಟಕಕ್ಕೆ ಅನ್ಯಾಯ,ತಾರತಮ್ಯ ಮಾಡುತ್ತ ಮಲತಾಯಿ ಧೋರಣೆ ಅನುಸರಿಸುತ್ತ ಬಂದಿರುವದರಿಂದ ಇದನ್ನು ಸರಿಮಾಡಲು ಪ್ರಾದೇಶಿಕ ಪಕ್ಷ ಸ್ಥಾಪಿಸುವ ಅನಿವಾಯ೯ತೆ ಒದಗಿದೆ ಎಂದರು.

ಸಮಿತಿಯ ಗೌರವ ಸಲಹೆಗಾರರು, ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಮಾತನಾಡಿ ವೈಚಾರಿಕ ಚಿಂತನೆಯುಳ್ಳ, ಸತ್ ಸಂಕಲ್ಪ ಹೊಂದಿದ, ಸಜ್ಜನ ರಾಜಕಾರಣಿಗಳನ್ನು ನಿಮಾ೯ಣ ಮಾಡುವ, ಉತ್ತರ ಕನಾ೯ಟಕ ಹೋರಾಟ ಸಮಿತಿಯ ಸಿದ್ಧಾಂತಗಳಿಗೆ ಬದ್ಧರಾಗಿರುವ ಜನನಾಯಕರನ್ನು ಸೃಷ್ಠಿಸುವ ಹೊಸ ರಾಜಕೀಯ ಪಕ್ಷದ ಅವಶ್ಯಕತೆ ಇದೆ ಎಂದರು. ಗೆಲುವು ಮುಖ್ಯವಲ್ಲಾ ಸೈದ್ಧಾಂತಿಕ ನಿಲುವು ಮುಖ್ಯ ಎಂದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಉತ್ತರ ಕನಾ೯ಟಕ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಭೀಮಪ್ಪಾ ಗಡಾದ ಉತ್ತರ ಕನಾ೯ಟಕ ಪ್ರತ್ಯೇಕ ರಾಜ್ಯವಾಗುದು ನಿಶ್ಚಿತ ಎಂದರು. ಪ್ರತ್ಯೇಕ ರಾಜ್ಯ ನಮ್ಮ ಉತ್ತರ ಕನಾ೯ಟಕದ ಜನರ ನ್ಯಾಯಯುತ ಬೇಡಿಕೆ. ಸಕಾ೯ರ ಇದಕ್ಕೆ ಸ್ಪಂದಿಸಬೇಕು. ರಾಷ್ಟ್ರೀಯ ಪಕ್ಷಗಳು ಜನರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಉತ್ತರ ಕನಾ೯ಟಕದ 13 ಜಿಲ್ಲೆಗಳಾದ್ಯಂತ ಸುಮಾರು 62 ಲಕ್ಷ ಜನರು ಪ್ರತ್ಯೇಕ ರಾಜ್ಯದ ಕುರಿತು ಅಭಿಪ್ರಾಯ ನೀಡಿದ್ದು 91% ಜನರು ಪ್ರತ್ಯೇಕತೆಯನ್ನು ಪ್ರತಿಪಾದಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳು ಜನರ ಬೇಡಿಕೆಗೆ ಸ್ಪಂದಿಸದಿದ್ದರೆ ಪ್ರಾದೇಶಿಕ ಪಕ್ಷ ರಚನೆ ಅನಿವಾಯ೯ ಎಂದರು. ನಮ್ಮ ಬೇಡಿಕೆಗೆ ಧ್ವನಿಯಾಗುವವರಿಗೆ ನಾವು ಬೆಂಬಲಿಸುತ್ತೇವೆ. ಇಲ್ಲದೆ ಹೋದರೆ ನಾವೇ ರಾಜಕೀಯ ಕಣಕ್ಕೆ ಇಳಿಯುವದು ಅನಿವಾಯ೯ ಎಂದರು. ಮುಧೋಳ ಮತಕ್ಷೇತ್ರದ ಆಕಾಂಕ್ಷಿ ಸತೀಶ ಬಂಡಿವಡ್ಡರವರ ಸ್ಪಧೆ೯ಗೆ ನಮ್ಮ ಹೋರಾಟ ಸಮಿತಿಯ ಬೆಂಬಲವಿದೆ ಎಂದರು. ಇದೆ ಸಂದಭ೯ದಲ್ಲಿ ಉತ್ತರ ಕನಾ೯ಟಕದ ಕುರಿತು ಆಡಿಯೋ, ವಿಡಿಯೋ ಸಾಂಗ್ ನಿಮಿ೯ಸಿದ ಕಲಾವಿದ ಹಾಗೂ ಹೋರಾಟ ಸಮಿತಿಯ ಜಮಖಂಡಿ ತಾಲೂಕಿನ ಸಂಘಟನಾ ಕಾಯ೯ದಶಿ೯ ಪ್ರದೀಪ ಹಿರೇಮಠವರನ್ನು ಸನ್ಮಾನಿಸಲಾಯಿತು. ಮತ್ತು ನೂತನ ಪದಾಧಿಕಾರಿಗಳಿಗೆ ನೇಮಕಾತಿ ಧೃಡೀಕರಣ ಪತ್ರ ವಿತರಿಸಲಾಯಿತು.

ಸಭೆಯಲ್ಲಿ ಹೋರಾಟ ಸಮಿತಿಯ ರಾಜ್ಯ ಗೌರವ ಸಲಹೆಗಾರ ಡಾ. ಬಸವರಾಜ ಗವಿಮಠ, ಡಾ. ಸಿದ್ದು ದಿವಾಣ ಉಪಾಧ್ಯಕ್ಷ ಎ.ಎ. ದಂಡಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೋರಾಟ ಸಮಿತಿ ಗೌರವ ಸಲಹೆಗಾರ ರಾಚಪ್ಪಾ ಕರೆಹೊನ್ನ, ಉಪಾಧ್ಯಕ್ಷ ಮಂಜುನಾಥ ಸಬರದ, ಪ್ರಧಾನ ಕಾಯ೯ದಶಿ೯ ನಗೇಶ ಗೋಲಶೆಟ್ಟಿ, ಖಜಾಂಚ ನೀಲೇಶ ಬನ್ನೂರ, ಕಾನೂನು ಸಲಹೆಗಾರ ಪ್ರಕಾಶ ವಸ್ತ್ರದ, ಕಾಯ೯ದಶಿ೯ಗಳಾದ ಎಸ್.ಎಸ್.ಪವಾಡಶೆಟ್ಟರ,ಎ.ಎಸ್.ಬದಾಮಿ, ಸಂಘಟನಾ ಕಾಯದಶಿ೯ಗಳಾದ ಪ್ರಕಾಶ ದೇಸಾಯಿ ಹಾಗೂ ವಿಲೀನಕುಮಾರ ತಾರಿಹಾಳ, ಕಯ೯ಕಾರಿಣಿ ಸದಸ್ಯರುಗಳಾದ ನಿವೃತ್ತ ಮಿಲಿಟರಿ ಸುಬೇದಾರ ಶ್ರೀಶೈಲ ಪಸಾರ, ನಿವೃತ್ತ ತಹಶೀಲ್ದಾರ ಡಿ.ರಂಗನಾಥ,ಮಹಮ್ಮದ ಇಫಾ೯ನ್ ಶೇಖ್, ಚೆನ್ನಯ್ಯಾ ಕಲ್ಮಠ,ಬೀದರ್ ಜಿಲ್ಲಾ ಪ್ರಧಾನ ಕಾಯ೯ದಶಿ೯ ಅನಂತರೆಡ್ಡಿನೋರ್, ಕಲಬುಗಿ೯ ಜಿಲ್ಲಾಧ್ಯಕ್ಷ ಎ.ಎಸ್.ಭದ್ರಶೆಟ್ಟಿ,ವಿಜಯಪೂರ ಜಿಲ್ಲಾಧ್ಯಕ್ಷ ಕಾಮಣ್ಣಾ ಗಂಗನಳ್ಳಿ, ಬೆಳಗಾವಿ ಜಿಲ್ಲಾಧ್ಯಕ್ಷ ಅಡವೇಶ ಇಟಗಿ, ಹಾವೇರಿ ಜಿಲ್ಲಾ ಸಂಚಾಲಕ ದುಗ೯ಪ್ಪಾ ಹಂಚಿನಮನಿ, ಬಾಗಲಕೋಟ ಜಿಲ್ಲಾ ಸಂಘಟನಾ ಕಾಯ೯ದಶಿ೯ ಪವನ ವಾಲಿ ಹೋರಾಟ ಸಮಿತಿ ತಾಲೂಕು ಹಾಗೂ ಗ್ರಾಮ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು. ಮಧೋಳ ತಾಲೂಕಾ ಜೆ.ಡಿ.ಎಸ್ ಅಧ್ಯಕ್ಷ ಹಾಗೂ ಎಂ.ಎಲ್.ಎ ಆಕಾಂಕ್ಷಿ ಶಂಕರ್ ನಾಯಕ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಸದಾಶಿವ ಮಾಳಿ, ರೈತ ಹೋರಾಟಗಾರ ಬಸವರಾಜ ಜಮಖಂಡ, ನ್ಯಾಯವಾದಿ ಬಿ.ಎಸ್.ರಾಮತೀಥ೯ ಹಾಗೂ ಮಂತಾದವರು ಹಾಜರಿದ್ದರು. ಬಾಗಲಕೋಟ ವಾತೆ೯ ಪಾಕ್ಷಿಕ ಪತ್ರಿಕೆ ಸಂಪಾದಕ ಸಿರಾಜ ಹೊರಟ್ಟಿ, ಹಿಪ್ಪರಗಿ ದಶ೯ನ ಪಾಕ್ಷಿಕ ಪತ್ರಿಕೆ ಸಂಪಾದಕ ನಾಗೇಶ ಜತ್ತಿ ಪತ್ರಿಕೆ ಪ್ರಾರಂಭಿಸುವ ಕುರಿತು ಸಮಿತಿಗೆ ಮಾಹಿತಿ ನೀಡಿದರು. ಮುಧೋಳ ತಾಲೂಕಾ ವಿಧ್ಯಥಿ೯ ಘಟಕದ ಅಧ್ಯಕ್ಷ ಸೋಮು ಜಗದಾಳ, ತಾಲೂಕಾ ಸಂಘಟನಾ ಕಾಯ೯ದಶಿ೯ ಪ್ರಭು ಹೊನವಾಡ ಸಭಿಕರಿಗೆ ಸಮಿತಿಯ ಸಂಕ್ಷಿಪ್ತ ಪರಿಚಯ ಮಾಡಿಸಿದರು.  ಪ್ರಧಾನ ಕಾಯ೯ದಶಿ೯ ಭೀಮಶಿ ಹುನ್ನೂರ ಕಾಯ೯ಕ್ರಮ ನಿರೂಪಿಸಿದರು. ಉಕಹೋಸ ಉಪಪ್ರಧಾನ ಕಛೇರಿ ಕ್ಲಕ್೯ ವಿನೋದ ಬಡಿಗೇರ ವಂದಿಸಿದರು.

Comments