UK Suddi
The news is by your side.

ಮಹದಾಯಿ ವಿವಾದವನ್ನು 1 ತಿಂಗಳಲ್ಲಿ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ ಯಡಿಯೂರಪ್ಪ.

ಪರಿವರ್ತನಾ ಯಾತ್ರೆಯ 12ನೇ ದಿನವಾದ ಇಂದು ಮಾಜಿ ಮುಖ್ಯಮಂತ್ರಿಗಳಾದ  ಬಿ.ಎಸ್.ಯಡಿಯೂರಪ್ಪ ಅವರು ನೇತೃತ್ವದಲ್ಲಿ ಇಂದು  ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಯಾತ್ರೆ ಮುಂದುವರೆದಿದೆ. ಮುಂಡಗೋಡದಲ್ಲಿ ನಡೆದ ಸಾರ್ವಜನಿಕ ಸಮಾವೇಶಕ್ಕೆ ಭಾರೀ ಜನಸ್ತೋಮ ನೆರೆದಿತ್ತು. 
ಸಭೆಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪನವರು ಬಹುಕಾಲದ ಬೇಡಿಕೆಯಾದ ಮಹದಾಯಿ ವಿವಾದವನ್ನು 1ತಿಂಗಳಲ್ಲಿ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಮುಖಂಡರುಗಳಾದ ಅನಂತ್ ಕುಮಾರ್ ಹೆಗಡೆ, ಪ್ರಹ್ಲಾದ್ ಜೋಶಿ, ಸಿಎಂ ಉದಾಸಿ, ಶೋಭಾ ಕರಂದ್ಲಾಜೆ, ಕುಮಾರ್ ಬಂಗಾರಪ್ಪ ಮೊದಲಾದವರು ಪಾಲ್ಗೊಂಡಿದ್ದರು.

Comments