UK Suddi
The news is by your side.

ಸವದತ್ತಿಯಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಭರ್ಜರಿ ಬೆಂಬಲ

ಬೆಳಗಾವಿ:ಇಂದು ಸಂಜೆ ಸವದತ್ತಿಯಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಭರ್ಜರಿ ಬೆಂಬಲ ದೊರಕಿತು.ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಡನೆ ಮಾಜಿ ಮುಖ್ಯಮಂತ್ರಿಗಳು ಹಾಗು ಯಾತ್ರೆಯ ಸಾರಥ್ಯ ವಹಿಸಿರುವ ಯಡಿಯೂರಪ್ಪನವರನ್ನು ಸವದತ್ತಿ ಜನತೆ ಸ್ವಾಗತಿಸಿತು.ಭಾರೀ ಜನಸಾಗರವನ್ನುದ್ದೇಶಿಸಿ ಯಡಿಯೂರಪ್ಪ ಅವರು ಬಹಿರಂಗ ಭಾಷಣ ಮಾಡಿದರು. 

ಶಾಸಕರಾದ ಆನಂದ ಮಾಮನಿಯವರು ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು.

Comments