UK Suddi
The news is by your side.

17ವರ್ಷಗಳ ನಂತರ ಭಾರತದ ಮುಡಿಗೆರೀದ ‘ಮಿಸ್ ವರ್ಲ್ಡ್ ಕಿರೀಟ

ಹೊಸದಿಲ್ಲಿ: ಮಿಸ್ ವರ್ಲ್ಡ್ 2017ರ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಮನುಷಿ ಚಿಲ್ಲರ್ ವಿಜೇತರಾಗಿದ್ದಾರೆ. ಈ ಮೂಲಕ ಮಿಸ್ ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿದ 6ನೆಯ ಭಾರತೀಯರಾಗಿದ್ದಾರೆ ಮನುಷಿ.

ಹರ್ಯಾಣ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಮನುಷಿ ಚಿಲ್ಲರ್ ಚೀನಾದ ಸಾನ್ಯಾ ಸಿಟಿ ಅರೆನಾದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಶ್ವಸುಂದರಿಯಾಗಿ ಹೊರಹೊಮ್ಮಿದ್ದಾರೆ. ಈ ಸ್ಪರ್ಧೆಯಲ್ಲಿ ೧೦೮ ದೇಶಗಳಿಂದ ಮಾಡೆಲ್ ಗಳು ಭಾಗವಹಿಸಿದ್ದರು.
2016ರ ಮಿಸ್ ವರ್ಲ್ಡ್ ಸ್ಟೆಫಾನಿ ಡೆಲ್ ವಲ್ಲೆ ಮನುಷಿ ಚಿಲ್ಲರ್ ಅವರಿಗೆ ಕಿರೀಟ ತೊಡಿಸಿದರು.

Comments