UK Suddi
The news is by your side.

ಹಿಂಗಾರು ಬೆಳೆಗಳಲ್ಲಿ ಕೀಟಗಳ ನಿರ್ವಹಣೆ 

ಸುದ್ದಿ: ಮಹಾಂತೇಶ ಹೊಂಗಲ್

ಬೈಲಹೊಂಗಲ: ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ SCH ಪ್ರತಿಷ್ಠಾನ ಮತ್ತು ಕೃಷಿ ಇಲಾಖೆ, ಬೈಲಹೊಂಗಲ ಹಾಗೂ ಎಫ್.ಎಮ್.ಸಿ. ಪ್ರೈವೇಟ್ ಲಿಮಿಟೆಡ್ ಇವರುಗಳ ಸಂಯುಕ್ತಾಶ್ರಯದಲ್ಲಿ “ಹಿಂಗಾರು ಬೆಳೆಗಳಲ್ಲಿ ಕೀಟಗಳ ನಿರ್ವಹಣೆ” ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಹಿಂಗಾರಿ ಜೋಳ ಮತ್ತು ಮೆಕ್ಕೆಜೋಳದಲ್ಲಿ ಬರುವ ಲದ್ದೆ ಹುಳು (ಸೈನಿಕ ಹುಳು) ವಿನ ನಿರ್ವಹಣೆ ಬಗ್ಗೆ ಮತ್ತು ನೊಂದಾಯಿಸಲ್ಪಡದ ಔಷಧಿ ಕಂಪನಿಗಳಿಂದ ಆಗುವ ದುಷ್ಪರಿಣಾಮದ ಬಗ್ಗೆ ಹಾಗು ನಕಲಿ ಔಷಧಿಗಳ ಬಗ್ಗೆಯೂ ಕೂಡ ಶ್ರೀ ಎಮ್.ಬಿ. ಹೊಸಮನಿ, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಬೈಲಹೊಂಗಲ ಇವರು ರೈತರಲ್ಲಿ ಜಾಗ್ರತಿ ಮೂಡಿಸಿದರು.

ಎಫ್.ಎಮ್.ಸಿ ಕಂಪನಿಯ ಶ್ರೀ ಆನಂದ ಕಟ್ಟಿ ಮಾರ್ಕೆಟಿಂಗ್ ಇಗ್ನಿಷನ್ ಎಕ್ಷಿಕ್ಯುಟಿವ್ ಅವರು ಕಡಲೆ ಬೆಳೆಯಲ್ಲಿ ಕೊರಾಜನ್ ಬಳಕೆಯ ಉಪಯೋಗದ ಮಾಹಿತಿ ನೀಡಿದರು.  

ಶ್ರೀ ಬಸವರಾಜ ಚ. ಹೊಂಗಲ, ಗೌರವಾಧ್ಯಕ್ಷರು SCH ಪ್ರತಿಷ್ಠಾನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಅಪ್ಪಯ್ಯ ಸ್ವಾಮಿಗಳು ಹಿರೇಮಠ ಅವರು ಮತ್ತು ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುಮಾರು 250 ಜನ ರೈತರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ, ಇದರ ಲಾಭ ಪಡೆದುಕೊಂಡರು. 

Comments