UK Suddi
The news is by your side.

ಕನಸಲ್ಲ ಇದು ನನಸು

ನನ್ನ ಪ್ರೀತಿಯ ನಲ್ಲಾ…
ಈ ಮುಂಜಾನೆ ಕಣ್ಣ ಬಿಟ್ಟು
ನೋಡಿದಾಗ …
ಪಕ್ಕದಲ್ಲಿ ನೀ ಇರಲಿಲ್ಲ …!
ನಿನ್ನ ಕನವರಿಸುತ್ತಾ ಮತ್ತೆ
ಬೆಚ್ಚಗೆ ಮಲಗಿದೆ ಕಂಬಳಿಯ
ಅಪ್ಪುಗೆಯಲ್ಲಿ ….
ಚಳಿಗೆ ನಡುಗಿತ್ತು ತನುವು
ನಿನ್ನ ಬಯಸಿತ್ತು ಮನವು
ಕಣ್ಣು ಬಿಡಲು ಮನಸಾಗಲಿಲ್ಲ
ಆಗಷ್ಟೇ … ಕನಸಲಿ ನಿನ್ನ ಆಗಮನವಾಗಿತ್ತಲ್ಲ !!
ಗುಳಿಕೆನ್ನಯ ನಗುವಿನ ಸರದಾರ
ಮುಗುಳು ನಗುತ್ತಾ…. ನನ್ನ ಪ್ರೀತಿ ಇಂದ ನೋಡುತ್ತಾ….ನನ್ನ ಹಣೆಯಲ್ಲಿ ಹರಡಿದ ಕೂದಲನ್ನು ಸರಿಸಿ ಕೊಟ್ಟ ಒಂದು ಮುತ್ತ !
ಕಣ್ಣುಬಿಟ್ಟು ನೋಡಿದೆ ತಕ್ಷಣ …….
ಕೈಹಿಡಿದು ಎಬ್ಬಿಸಿ ……
ಬಿಸಿಕಾಫಿಯ ಬಟ್ಟಲ ನನ್ನ ಕೈಗಿಟ್ಟಾ !!
ಆಗಲೇ ತಿಳಿದಿದ್ದು ಇದು ಕನಸಲ್ಲಾ ನನಸೆಂದು !!

.

(ಬರವಣಿಗೆ )
ಇವಾ ಲೇಖಾ
ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ ??
ivaalekha7717@gmail.com
ವಾಟ್ಸ್ ಆಪ್ No: 9741329365

Comments